
ರಾಷ್ಟ್ರ ರಾಜಧಾನಿ ದಿಲ್ಲಿಯ ನೂತನ ಸಿಎo ರೇಖಾ ಗುಪ್ತಾ ಪ್ರಮಾಣವಚನಕ್ಕೆ ಕ್ಷಣಗಣನೆ ಆರಂಭವಾಗಿದೆ. 27 ವರ್ಷದ ಬಳಿಕ ಗೆದ್ದು ಬೀಗಿದ ಬಿಜೆಪಿ ಅಚ್ಚರಿಯ ರೀತಿಯಲ್ಲಿ ಮಹಿಳಾ ಶಾಸಕಿಯನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಿದೆ. ರಾಮಲೀಲಾ ಮೈದಾನದಲ್ಲಿ ವರ್ಣರಂಜಿತ ಕಾರ್ಯಕ್ರಮ ನಡೆಯಲಿದೆ.
ಎಬಿವಿಬಿಯಿಂದ ಮುನ್ನೆಲೆಗೆ ಬಂದು ರಾಜಕೀಯದಲ್ಲಿ ನೆಲೆ ಕಂಡುಕೊಂಡ ಮಹಿಳೆ ರೇಖಾ ಗುಪ್ತಾ ಅವರಿಗೆ ಮುಖ್ಯಮಂತ್ರಿ ಪಟ್ಟಿ ನೀಡಲಾಗಿದ್ದು,ದೆಹಲಿ ನಾಲ್ಕನೇ ಮಹಿಳಾ ಮುಖ್ಯಮಂತ್ರಿಯಾಗಿ ಇವತ್ತು ಅಧಿಕಾರ ಸ್ವೀಕರಿಸಲಿದ್ದಾರೆ.
ರೇಖಾ ಗುಪ್ತಾ ಅವರಿಗೆ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಇವತ್ತು ಮಧ್ಯಾಹ್ನ 12:35 ಕ್ಕೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಇನ್ನು ಪ್ರಮಾಣವಚನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ನಿತಿನ್ ಗಡ್ಕರಿ, ರಾಜನಾಥ್ ಸಿಂಗ್, ಎನ್‌ಡಿಎ ನಾಯಕರು ಭಾಗವಹಿಸಲಿದ್ದಾರೆ.
ದೆಹಲಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 70 ಸೀಟುಗಳು 48 ಬಿಜೆಪಿ ಪಾಲಾದರೆ, 20 ಆಮ್ ಆದ್ಮಿ ಪಕ್ಷದ ಪಾಲಾಗಿತ್ತು. ಕಾಂಗ್ರೆಸ್ ಗೆ ಹ್ಯಾಟ್ರಿಕ್ ಸೋಲಾಗಿತ್ತು.
