
ವಿಟ್ಲ :ಬಹಳ ಯಶಸ್ವಿಯಾಗಿ ಸಮಾಪ್ತಿಯಾದ ವಿಟ್ಲ ಊರೂಸ್ ಸಭಾ ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ಇತಿಹಾಸ ಪ್ರಸಿದ್ಧ ವಿಟ್ಲ ಮುಖಾಮ್ ಊರೂಸ್ ಯಶಸ್ವಿಯ ರೂವಾರಿಗಳಾಗಿರುವ ಸೃಜನಶೀಲ ವ್ಯಕ್ತಿತ್ವದ ಸಂಘಟನಾ ಚತುರರೂ ಆಗಿರುವ ಹಂಝ ವಿ.ಕೆ.ಎಂ. ಹಾಗೂ ಹನೀಫ್ ರೆಡ್ ಟ್ಯಾಗ್ ವಿಟ್ಲ ಇವರನ್ನು ಡಿ’ ಗ್ರೂಪ್(ರಿ) ವಿಟ್ಲ ವತಿಯಿಂದ ಸನ್ಮಾನಿಸಲಾಯಿಯಿತು..
ಸಾಮಾಜಿಕ ಕಳಕಳಿಯ ಹತ್ತು ಹಲವಾರು ಕಾರ್ಯ ಚಟುವಟಿಕೆಗಳಿಂದ ಸದಾ ಕಷ್ಟದಲ್ಲಿರುವ ರೋಗಿಗಳ ಪಾಲಿಗೆ ಬೆಳಕಾಗುತ್ತಾ ಬಂದಿರುವ ಜಿಲ್ಲೆಯಲ್ಲಿಯೇ ಮನೆಮಾತಾಗಿರುವ ಡಿ’ ಗ್ರೂಪ್(ರಿ) ವಿಟ್ಲ ನಡೆಸಿದ ಈ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನಿತರನ್ನು ಸೆಯ್ಯದ್ ಕುಟುಂಬದ ಅಗ್ರಗಣ್ಯರಾಗಿರುವ ಸೆಯ್ಯದ್ ಅಲಿ ತಂಙಲ್ ಕುಂಬೋಳ್ ಅಭಿನಂದಿಸಿ ಸನ್ಮಾನಿಸಿದರು ವೇದಿಕೆಯಲ್ಲಿ ಡಿ’ ಗ್ರೂಪ್(ರಿ) ವಿಟ್ಲ ಇದರ ಗೌರವಾಧ್ಯಕ್ಷರಾಗಿರುವ ಅಝೀಝ್ ಸನಾ, ಅಧ್ಯಕ್ಷರಾಗಿರುವ ರಿಯಾಝ್ ವಿ.ಎಚ್, ಉಪಾಧ್ಯಕ್ಷರಾಗಿರುವ ಇಕ್ಬಾಲ್ ಶೀತಲ್, ಕೋಶಾಧಿಕಾರಿಯಾಗಿರುವ ಬಶೀರ್ ಬೊಬ್ಬೆಕೇರಿ, ಸದಸ್ಯರಾಗಿರುವ ಇರ್ಷಾದ್ ಸೆಲೆಕ್ಟ್, ಸಫ್ವಾನ್ ಮೆಗಿನಪೇಟೆ, ಸ್ಥಾಪಕಾಧ್ಯಕ್ಷರಾಗಿರುವ ಸಮದ್ ಏರ್ ಸೌಂಡ್ಸ್, ಭಾತೀಶ್ ಮೇಗಿನಪೇಟೆ, ನೌಶಾದ್ ಕುರುಂಬಳ, ಹಾಫಿಲ್ ಚಂದಳಿಕೆ, ಸಿನಾನ್ ಮೇಗಿನಪೇಟೆ, ಅಝೀಝ್ ಕಾಶಿಮಠ ಉಪಸ್ಥಿತರಿದ್ದರು.
