
ಆಳಪ್ಪುಝ:- ಶೈಖುನಾ ಬಾದ್ಶಾ ಸಖಾಫಿ ಆಳಪ್ಪುಝ ಉಸ್ತಾದ್ ಮುನ್ನಡೆಸುವ ವಿಶ್ವ ವಿಖ್ಯಾತ ದಕ್ಷಿಣ ಕೇರಳದ ಅತೀ ದೊಡ್ಡ ದಾರ್ಮಿಕ ವಿದ್ಯಾ ಸಂಸ್ಥೆ ಜಾಮಿಯಾ ಹಾಶಿಮಿಯ್ಯಾ ಏಕ ವರ್ಷ ದೌರತುಲ್ ಹದೀಸ್ ಮುತವ್ವಲ್ ಕೋರ್ಸು ಯಶಸ್ವಿಯಾಗಿ ಪೂರ್ತಿಗೊಳಿಸಿ ಫೆಬ್ರವರಿ 25 ರಂದು ನಡೆದ ಹಾಶಿಮಿಯ್ಯಾ 25 ನೇ ವಾರ್ಷಿಕ 7ನೇ ಸಿಲ್ವರ್ ಜ್ಯುಬಿಲಿ ಸನದುದಾನ ಮಹಾ ಸಮ್ಮೇಳನದಲ್ಲಿ ಬಾಗ್ದಾದ್ ಯುನಿವರ್ಸಿಟಿಯ ಮಸ್ಜಿದ್ ಚೀಫ್ ಇಮಾಂ ಮತ್ತು ಹದೀಸ್ ವಿದ್ವಾಂಸ ಶೈಖ್ ಅನಸ್ ಮಹ್ಮೂದ್ ಅಲ್ ಖಲಫ್ ಈಸಾವಿಯವರ ಸಮ್ಮುಖದಲ್ಲಿ ಸಮಸ್ತ ಕೇಂದ್ರ ಮುಶಾವರ ಸುನ್ನೀ ಜಂಇಯ್ಯತುಲ್ ಉಲಮಾದ ಉಪಾಧ್ಯಕ್ಷ ಅಮೀರುಲ್ ಉಮ್ಮ ಸಯ್ಯಿದ್ ಅಲೀ ಬಾಫಖೀ ತಂಙಳ್ ಕೊಯಿಲಾಂಡಿಯವರ ದಿವ್ಯ ಹಸ್ತದಿಂದ ಪುತ್ತೂರು ತಾಲೂಕಿನ ಕುರಿಯ ನಿವಾಸಿ ಅಹ್ಮದ್ ಹಾಶಿಮಿ ಅಲ್ ಮದೀನಿ ರವರು ಮೌಲವಿ ಫಾಝಿಲ್ ಹಾಶಿಮಿ ಪದವಿ ಸ್ವೀಕರಿಸಿದ್ದಾರೆ.
ಇವರು ಸುಧೀರ್ಘ ಕಾಲ ಮದೀನತುಲ್ ಉಲೂಂ ಶರೀಅತ್ ಕಾಲೇಜು ಮೂಡಡ್ಕದಲ್ಲಿ ಶೈಖುನಾ ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರು ಉಸ್ತಾದರ ಬಳಿ ವಿದ್ಯಾರ್ಜನೆ ಗೈದು ನಂತರ ಮದೀನತುಲ್ ಉಲೂಂ 3ನೇ ಬ್ಲಾಕ್ ಕಾಟಿಪಳ್ಳ ಕೃಷ್ಣಾಪುರದಲ್ಲಿಯೂ ಕಲಿತು ಉನ್ನತ ಶಿಕ್ಷಣ ಪಡೆಯಲು ದಕ್ಷಿಣ ಕೇರಳದ ಅತ್ಯುನ್ನತ ವಿದ್ಯಾ ಸಂಸ್ಥೆ ಜಾಮಿಯಾ ಹಾಶಿಮಿಯ್ಯಾಗೆ ತೆರಳಿ ವಿದ್ಯಾಭ್ಯಾಸ ಪೂರ್ಣಗೊಳಿಸಿ ಇದೀಗ ಮೌಲವಿ ಫಾಝಿಲ್ ಹಾಶಿಮಿ ಪದವಿ ಪಡೆದಿದ್ದಾರೆ.
