
ಪುತ್ತೂರು: ಮುಖ್ಯರಸ್ತೆಯ ಹೆಗ್ಡೆ ಆರ್ಕೆಡ್ ನಲ್ಲಿ ಕಾರ್ಯಾಚರಿಸುತಿರುವ ಸೋಜಾ ಮೆಟಲ್ ಮಾರ್ಟ್ ಮಾಲಕ ಅಲೆಕ್ಸ್ ಮಿನೇಜಸ್(69ವ.) ರವರು ಹೃದಯಾಘಾತದಿಂದ ಫೆ.27 ರಂದು ರಾತ್ರಿ ನಿಧನ ಹೊಂದಿದ್ದಾರೆ.. ಅಲೆಕ್ಸ್ ಮಿನೇಜಸ್ ರವರು ಕೊಡುಗೈ ದಾನಿಯಾಗಿದ್ದು, ಮಾಯಿದೆ ದೇವುಸ್ ಚರ್ಚ್ ನ ಡೊನ್ ಬೊಸ್ಕೊ ಕ್ಲಬ್ ಹಾಗೂ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿಯ ಸ್ಥಾಪಕ ಸದಸ್ಯರಾಗಿದ್ದರು.
ಮೃತರು ಪತ್ನಿ ನಿವೃತ್ತ ಶಿಕ್ಷಕಿ ಡೊರತಿ ಮಿನೇಜಸ್, ಪುತ್ರ ಎಂಬಿಎ ಪದವೀಧರ ಪ್ರಸ್ತುತ ಸೋಜಾ ಮೆಟಲ್ ಮಾರ್ಟ್ ಸಂಸ್ಥೆಯನ್ನು ಮುನ್ನೆಡೆಸುತ್ತಿರುವ ದೀಪಕ್ ಮಿನೇಜಸ್, ಪುತ್ರಿಯರಾದ ದೀಪ್ತಿ ಮಿನೇಜಸ್, ದಿವ್ಯ ಮಿನೇಜಸ್, ಸೊಸೆ ಶರಲ್ ಮಿನೇಜಸ್, ಅಳಿಯಂದಿರಾದ ಅರುಣ್ ಕ್ರಾಸ್ತಾ, ರೇಶಲ್ ರೇಗೊ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ
