
ಅಬುದಾಬಿಯಲ್ಲಿ ಭಾನುವಾರ ಮುಂಜಾನೆ ನಡೆದ ರಸ್ತೆ ಅಪಘಾತದಲ್ಲಿ ನಾಲ್ವರು ಕೇರಳ ಮೂಲದ ನಾಲ್ವರು ಒಡಹುಟ್ಟಿದ ಸಹೋದರರು ಮತ್ತು ಅವರನ್ನು ನೋಡಿಕೊಳ್ಳುತ್ತಿದ್ದ ಮನೆಕೆಲಸದಾಕೆ ಸಾವನಪ್ಪಿದ ಘಟನೆ ನಡೆದಿದೆ. ಕೇರಳದ ಮೂಲದ ಈ ಕುಟುಂಬವು ಲಿವಾ ಡೇಟ್ಸ್ ಉತ್ಸವದಲ್ಲಿ ಭಾಗವಹಿಸಿ ಅಬುಧಾಬಿ-ದುಬೈ ಮೋಟಾರ್‌ವೇ ಮೂಲಕ ಕಾರಿನಲ್ಲಿ ತಮ್ಮ ಮನೆಗೆ ಹಿಂತಿರುಗುತ್ತಿದ್ದಾಗ ಶಹಾಮಾದಲ್ಲಿ ಅಪಘಾತ ಸಂಭವಿಸಿದೆ.
ಮೃತರನ್ನು ಅಶಾಜ್, 14; ಅಮ್ಮರ್, 12; ಅಜಮ್, 8; ಮತ್ತು ಅಯಾಶ್, 5 ಎಂದು ಗುರುತಿಸಲಾಗಿದ್ದು, ಅಪಘಾತದಲ್ಲಿ ಮಕ್ಕಳ ತಂದೆ ತಾಯಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಅಪಘಾತದಲ್ಲಿ ಅವರೊಂದಿಗೆ ಪ್ರಯಾಣಿಸುತ್ತಿದ್ದ ಮನೆಕೆಲಸದಾಕೆ ಕೂಡ ಸಾವನಪ್ಪಿದ್ದಾರೆ.
ಈ ಭೀಕರ ಅಪಘಾತದಲ್ಲಿ ಮಲಪ್ಪುರಂನ ಕಿಜಿಶ್ಸೆರಿಯ ಪುಳಿಯಕ್ಕೋಡಿನ ಮಲಯನ್ ಅಬ್ದುಲ್ ಲತೀಫ್ ಮತ್ತು ವಡಕರದ ಕುನ್ನುಮ್ಮಕರದ ರುಕ್ಸಾನ ಅವರ ಐವರು ಮಕ್ಕಳ ಅಶಾಜ್, ಅಮ್ಮರ್ ಮತ್ತು ಅಯಾಶ್ ತಕ್ಷಣವೇ ಸಾವನ್ನಪ್ಪಿದರೆ, ಅಜಮ್ ಸೋಮವಾರ ಸಂಜೆ ಶೇಖ್ ಶಖ್‌ಬೌಟ್ ವೈದ್ಯಕೀಯ ನಗರದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.
ಕುಟುಂಬದ ಇಚ್ಛೆಗೆ ಅನುಗುಣವಾಗಿ, ನಾಲ್ವರು ಗಂಡು ಮಕ್ಕಳನ್ನು ಯುಎಇಯಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ. ಇನ್ನು ಮನೆಕೆಲಸದಾಕೆಯ ಶವವನ್ನು ಆಕೆಯ ಕುಟುಂಬದೊಂದಿಗೆ ಅಂತ್ಯಕ್ರಿಯೆಗಾಗಿ ಕೇರಳಕ್ಕೆ ಹಿಂತಿರುಗಿಸಲಾಗಿದೆ. ಮಕ್ಕಳ ತಂದೆ ಅಬ್ದುಲ್ ಲತೀಫ್ ರಾಸ್ ಅಲ್ ಖೈಮಾದಲ್ಲಿ ಸ್ವಂತ ವ್ಯವಹಾರ ನಡೆಸುತ್ತಿದ್ದರೆ, ರುಖ್ಸಾನಾ ದುಬೈನಲ್ಲಿ ಆಸ್ತಿ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ.
ಚಳಿಗಾಲದ ರಜೆಯ ಕೊನೆಯ ವಾರಾಂತ್ಯವನ್ನು ಸದುಪಯೋಗಪಡಿಸಿಕೊಳ್ಳಲು ಅವರು ಸ್ನೇಹಿತರ ಗುಂಪಿನೊಂದಿಗೆ ಲಿವಾ ಉತ್ಸವಕ್ಕೆ ಪ್ರಯಾಣಿಸಿದ್ದರು ಆದರೆ ಅದು ದೊಡ್ಡ ದುರಂತಕ್ಕೆ ಕಾರಣವಾಯಿತು.






