
ಪುತ್ತೂರು: ಹೂವಿನ ವ್ಯಾಪಾರಿಯಾಗಿದ್ದ ಹಾಗೂ ಮೂಲತಃ ಸಾಮೆತ್ತಡ್ಕ ನಿವಾಸಿಯಾಗಿ ಪಾಂಗ್ಲಾಯಿಯಲ್ಲಿ ವಾಸವಾಗಿದ್ದ ಹರೀಶ್ ಅಲಿಯಾಸ್ ಹರ್ಷ (47) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ (ಡಿ.31) ನಿಧನರಾದರು.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರೂ ಫಲಕಾರಿಯಾಗಲಿಲ್ಲ. ಹೂವಿನ ವ್ಯಾಪಾರ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಹರೀಶ್ ಅವರು ಸರಳ ಸ್ವಭಾವ ಹಾಗೂ ಸಮಾಜಮುಖಿ ನಡವಳಿಕೆಯಿಂದ ಪರಿಚಿತರಾಗಿದ್ದರು.
ಮೃತರು ಪತ್ನಿ ನಾಗರತ್ನ, ಮಗಳು ಸಿಂಚನ, ತಂದೆ ಕೊರಗಪ್ಪ, ತಾಯಿ ಪರಮೇಶ್ವರಿ ಹಾಗೂ ಸಹೋದರ ಸುಧೀರ್ ಅವರನ್ನು ಅಗಲಿದ್ದಾರೆ.
ಅಂತ್ಯಕ್ರಿಯೆ ಕುಟುಂಬದವರಿಂದ ನೆರವೇರಿಸಲಾಯಿತು. ಅವರ ನಿಧನಕ್ಕೆ ಸ್ನೇಹಿತರು, ಬಂಧುಬಳಗ ಹಾಗೂ ಸ್ಥಳೀಯ ನಾಗರಿಕರು ಸಂತಾಪ ವ್ಯಕ್ತಪಡಿಸಿದ್ದಾರೆ.






