
ಪುತ್ತೂರು: ಬನ್ನೂರು ಮೇಲ್ಮಜಲು ಮೂಲದ ಸಿವಿಲ್ ಇಂಜಿನಿಯರ್ ಅರುಣ್ ಆಚಾರ್ಯ (51) ಅವರು ಹೃದಯಾಘಾತದಿಂದ ಡಿ.19ರಂದು ನಿಧನರಾದರು.
ಬನ್ನೂರು ಮೇಲ್ಮಜಲು ನಿವಾಸಿಯಾಗಿರುವ ಕಂದಾಯ ಇಲಾಖೆಯ ನಿವೃತ್ತ ಖಜಾನಾಧಿಕಾರಿ ವಿಠಲ ಆಚಾರ್ಯ ಅವರ ಪುತ್ರರಾದ ಅರುಣ್ ಆಚಾರ್ಯ ಅವರು ಮುಂಡೂರು ಶೆಟ್ಟಿಮಜಲು ನಿವಾಸಿಯಾಗಿದ್ದು, ಸಿವಿಲ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಡಿ.19ರಂದು ಪುತ್ತೂರು ಬೈಪಾಸ್ ರಸ್ತೆಯಲ್ಲಿನ ಹೋಟೆಲ್ ಒಂದರಲ್ಲಿ ಉಪಹಾರ ಸೇವಿಸಿ ಕೈ ತೊಳೆದು ಹೊರಗೆ ಬರುತ್ತಿದ್ದ ವೇಳೆ ಕುಸಿದು ಬಿದ್ದು ಅಸ್ವಸ್ಥಗೊಂಡರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.
ಮೃತರು ತಂದೆ ವಿಠಲ ಆಚಾರ್ಯ, ಪತ್ನಿ, ಪುತ್ರ ಹಾಗೂ ಸಹೋದರರಾದ ಶಿಕ್ಷಕ ಕಿಶನ್ ಆಚಾರ್ಯ ಮತ್ತು ಎಸ್‌ಜಿ ಸೊಸೈಟಿಯಲ್ಲಿ ಮ್ಯಾನೇಜರ್ ಆಗಿರುವ ಕಿರಣ್ ಆಚಾರ್ಯ ಅವರನ್ನು ಅಗಲಿದ್ದಾರೆ.






