ಪುತ್ತೂರು: 32ನೇ ವರ್ಷದ ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ಕೂಟದಲ್ಲಿ 162 ಜೊತೆ ಕೋಣಗಳು ಭಾಗವಹಿಸಿದ್ದು, ಕನೆ ಹಲಗೆ ವಿಭಾದಲ್ಲಿ 5, ನೇಗಿಲು ಕಿರಿಯ ವಿಭಾಗದಲ್ಲಿ 79, ಹಗ್ಗ ಕಿರಿಯ ವಿಭಾಗದಲ್ಲಿ 25, ಅಡ್ಡ ಹಲಗೆ ವಿಭಾಗದಲ್ಲಿ 5, ನೇಗಿಲು ಹಿರಿಯ ವಿಭಾಗದಲ್ಲಿ 26 ಹಾಗೂ ಹಗ್ಗ ಹಿರಿಯ ವಿಭಾಗದಿಂದ 22 ಜೊತೆ ಕೋಣಗಳು ಭಾಗವಹಿಸಿದ್ದವು.

ಮಾ.1 ಹಾಗೂ 2ರಂದು ನಡೆದ ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳದ ವಿಜೇತರ ವಿವರ ಈ ಕೆಳಗಿನಂತಿದೆ.

ಕನೆಹಲಗೆ:
ಕನೆಹಲಗೆ ವಿಭಾಗದಲ್ಲಿ ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿಯವರ ಕೋಣಗಳು (ಪ್ರ). ಹಲಗೆ ಮುಟ್ಟಿದವರು ಬೈಂದೂರು ರಾಂಪನಹಿತ್ಲು ರಾಘವೇಂದ್ರ ಪೂಜಾರಿ. ಬೈಂದೂರು ಸಸಿಹಿತ್ಲು ವೆಂಕಟ ಪೂಜಾರಿಯವರ ಕೋಣಗಳು (ದ್ವಿ). ಬೈಂದೂರು ಹೊಸಕೋಟೆ ಮಹೇಶ್‌ ಪೂಜಾರಿಯವರು ಹಲಗೆ ಮುಟ್ಟಿದವರು.

ನೇಗಿಲು ಹಿರಿಯ:
ಬೆಳ್ಳಿಪ್ಪಾಡಿ ಕೈಪ ಭರತ್‌ ಕೇಶವ ಮಂಕು ಭಂಡಾರಿಯವರ ಕೋಣಗಳು (ಪ್ರ). ಓಡಿಸಿದವರು ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ. ಕಕ್ಕೆಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡರವರ ಕೋಣಗಳು (ದ್ವಿ). ಓಡಿಸಿದವರು ಕಕ್ಕೆಪದವು ಪೆಂರ್ಗಾಲು ಕೃತಿಕ್‌ ಗೌಡ.

ನೇಗಿಲು ಕಿರಿಯ:
ಮುನಿಯಾಲು ಉದಯ ಕುಮಾರ್‌ ಶೆಟ್ಟಿಯವರ ಕೋಣಗಳು (ಪ್ರ). ಓಡಿಸಿದವರು ಮಾಸ್ತಿಕಟ್ಟೆ ಸ್ವರೂಪ್.‌ ಮಿಜಾರ್‌ ಹರಿಮೀನಾಕ್ಷಿ ತೋಟ ಹರಿಯಪ್ಪ ಪೂಜಾರಿಯವರ ಕೋಣಗಳು(ದ್ವಿ). ಓಡಿಸಿದವರು ಪಟ್ಟೆ ಗುರುಚರಣ್.‌

ಅಡ್ಡ ಹಲಗೆ:
ಪುತ್ತೂರು ಸರೋವರ ಹವೀಶ ಹರೀಶ್‌ ಶಾಂತಿಯವರು ಕೋಣಗಳು(ಪ್ರ). ಹಲಗೆ ಮುಟ್ಟಿದವರು ಭಟ್ಕಳ ಹರೀಶ್.‌ ಬೋಳಾರ ತ್ರಿಶಾಲ್‌ ಕೆ. ಪೂಜಾರಿಯವರ ಕೋಣಗಳು (ದ್ವಿ). ಹಲಗೆ ಮುಟ್ಟಿದವರು ಮಂದಾರ್ತಿ ಭರತ್‌ ನಾಯ್ಕ್.‌

ಹಗ್ಗ ಹಿರಿಯ:
ಕೊಳಕೆ ಇರ್ವತ್ತೂರು ಭಾಸ್ಕರ ಎಸ್.‌ ಕೋಟ್ಯಾನ್ ರವರ ಕೋಣಗಳು(ಪ್ರ). ಓಡಿಸಿದವರು ಕಕ್ಕೆಪದವು ಪೆಂರ್ಗಾಲು ಕೃತಿಕ್‌ ಗೌಡ.  ನಂದಳಿಕೆ ಶ್ರೀಕಾಂತ್‌ ಭಟ್‌ರವರ ಕೋಣಗಳು (ದ್ವಿ). ಓಡಿಸಿದವರು ಬಂಬ್ರಾಣಬೈಲು ವಂದಿತ್‌ ಶೆಟ್ಟಿ.

ಹಗ್ಗ ಕಿರಿಯ:
ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ಕೌಶಿಕ್‌ ದಿನಕರ ಬಿ. ಶೆಟ್ಟಿಯವರ ಕೋಣಗಳು(ಪ್ರ). ಓಡಿಸಿದವರು ಮಂಗಲ್ಪಾಡಿ ರಕ್ಷಿತ್‌ ಶೆಟ್ಟಿ. ಬಡಗುಬೆಟ್ಟು ಕಲ್ಲಪಾಪು ಸಂದೀಪ್‌ ಶೆಟ್ಟಿಯವರ ಕೋಣಗಳು (ದ್ವಿ). ಓಡಿಸಿದವರು ಬೈಂದೂರು ವಿಶ್ವನಾಥ ದೇವಾಡಿಗ.

Leave a Reply

Your email address will not be published. Required fields are marked *

Join WhatsApp Group
error: Content is protected !!