
ಪುತ್ತೂರು :4 ಕಂದಾಯ ಜಿಲ್ಲೆಗಳನ್ನು ಒಳಗೊಂಡ ರೋಟರಿ ಜಿಲ್ಲೆ 3181ರ ಕ್ಲಬ್ ಗಳ ನಡುವಿನ ಜಿಲ್ಲಾ ಕಬಡ್ಡಿ ಪಂದ್ಯಕೂಟ ಫೆ. 23 ರಂದು ರೋಟರಿ ಕ್ಲಬ್ ಮಡಿಕೇರಿ ಮಿಸ್ಟಿ ಹಿಲ್ಸ್ ನೇತೃತ್ವದಲ್ಲಿ ಮಡಿಕೇರಿ ಗಾಂಧಿ ಮೈದಾನದಲ್ಲಿ ನಡೆಯಿತು. ಈ ಕಬಡ್ಡಿ ಕೂಟದಲ್ಲಿ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ತೃತೀಯ ಬಹುಮಾನ ಪಡೆಯಿತು. ಈ ಪಂದ್ಯಕೂಟದಲ್ಲಿ ಪುತ್ತೂರು ಸೆಂಟ್ರಲ್ ತಂಡವನ್ನು ರೊ.ಪ್ರದೀಪ್ ಬೊಲ್ವಾರ್, ರೊ. ನವೀನ್ ಚಂದ್ರ ನಾಯ್ಕ್, ರೊ. ಚಂದ್ರಹಾಸ ರೈ, ರೊ. ಜಯಪ್ರಕಾಶ್ ಎ. ಎಲ್., ರೊ. ಮಹೇಶ್ ಚಂದ್ರ ಸಾಲಿಯನ್, ರೊ. ಜಗನ್ನಾಥ ಅರಿಯಡ್ಕ, ರೊ. ಸಂತೋಷ್ ಶೆಟ್ಟಿ ಪ್ರತಿನಿಧಿಸಿದ್ದರು.



ಫೆ. 25ರಂದು ನಡೆದ ರೋಟರಿ ಪುತ್ತೂರು ಸ್ವರ್ಣಮತ್ತು ರೋಟರಿ ಪುತ್ತೂರು ಸೆಂಟ್ರಲ್ ಜಂಟಿಯಾಗಿ ನಡೆಸಿದ ರೋಟರಿ ದಿನ ಮತ್ತು ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ವಿಜೇತ ತಂಡವನ್ನು ಗೌರವಿಸಲಾಯಿತು. ವಲಯ 5ರ ಸಹಾಯಕ ಗವರ್ನರ್ ರೊ. ಸೂರ್ಯನಾಥ ಆಳ್ವ ವಿಜೇತ ತಂಡವನ್ನು ಅಭಿನಂದಿಸಿದರು. ಜಂಟಿ ಸಭೆಯ ಮತ್ತು ರೋಟರಿ ಡೇ ಯ ಮಹತ್ವವನ್ನು ರೊ. ಡಾ. ರಾಜೇಶ್ ಬೆಜ್ಜಂಗಳ ತಿಳಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿ ರೊ. ದಿವಾಕರ ರೈ, ರೋಟರಿ ಪುತ್ತೂರು ಸೆಂಟ್ರಲ್ ಅಧ್ಯಕ್ಷ ರೊ. ಅಶ್ರಫ್ ಪಿ. ಎಂ. ರೋಟರಿ ಪುತ್ತೂರು ಸ್ವರ್ಣ ಅಧ್ಯಕ್ಷ ರೊ. ಸುರೇಶ್ ಪಿ. ಸೆಂಟ್ರಲ್ ಕಾರ್ಯದರ್ಶಿ ವಸಂತ ಶಂಕರ್ ಸ್ವರ್ಣ ಕಾರ್ಯದರ್ಶಿ ರೊ. ಸೆನೋರಿಟ ಆನಂದ್ ಉಪಸ್ಥಿತರಿದ್ದರು.
ಎರಡು ಕ್ಲಬ್ಬಿನ್ ಸದಸ್ಯರು ಭಾಗವಹಿಸಿದ್ದರು ಅನ್ ದಿಪಿಕಾ ವಸಂತ್ ನಾಯಕ್ ಪ್ರಾರ್ಥನೆ ಗೈದರು ,ನಿಯೋಜಿತ ಅದ್ಯಕ್ಷರುಗಳಾದ ಚಂದ್ರಹಾಸ ರೈ ಸ್ವಾಗತಿಸಿದರು. ಸುಭಾಸ್ ರೈ ಬೆಳ್ಳಿಪ್ಪಾಡಿ ವಂದನಾರ್ಪಾನ ಗೈದರು









