
ಪುತ್ತೂರು: ಮಾದ್ಯಮ ಜಗತ್ತಿನಲ್ಲಿ ಪ್ರಸ್ತುತ ವೆಬ್ ಚಾನೆಲ್‌ಗಳು ಅತೀ ಹೆಚ್ಚಿನ ಜನರನ್ನು ತಲುಪುತ್ತಿದ್ದು, ಇದಕ್ಕೆ ಪುತ್ತೂರಿನ ನಿಮ್ಮ `ವಿದ್ಯಾಮಾನ’ ವೆಬ್ ನ್ಯೂಸ್ ಚಾನೆಲ್ ಇನ್ನೊಂದು ಉದಾಹರಣೆಯಾಗಿದೆ. ಮಾರ್ಚ್ ೧ ಮತ್ತು ೨ರಂದು ನಡೆದ ಪುತ್ತೂರಿನ ಇತಿಹಾಸ ಪ್ರಸಿದ್ಧ ಕೋಟಿ ಚೆನ್ನಯ ಜೋಡು ಕರೆ ಕಂಬಳವನ್ನು ವಿದ್ಯಾಮಾನ ನೇರ ಪ್ರಸಾರ ಮಾಡಿದೆ. ಇದರ ವ್ಯೂಸ್ ೧.೫೦ ಲಕ್ಷದ ಸನಿಹ ತಲುಪಿದೆ.
ವಿದ್ಯಾಮಾನ ಯೂ ಟ್ಯೂಬ್ ಚಾನೆಲ್ ನಲ್ಲಿ ನಡೆದ ಈ ನೇರ ಪ್ರಸಾರವನ್ನು ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದಾರೆ. ಇದು ನಮಗೆ ಹೆಮ್ಮೆಯ ಸಂಗತಿಯಾಗಿದೆ. ಇದಕ್ಕೆ ನಿಮ್ಮ ದೊಡ್ಡ ಮಟ್ಟದ ಪ್ರೋತ್ಸಾಹವೇ ಕಾರಣವಾಗಿದೆ ಎಂಬುವುದನ್ನು ಅತ್ಯಂತ ವಿನಯದಿಂದ ನಿಮ್ಮ ಮುಂದಿಡುತ್ತಿದ್ದೇವೆ. ವಿದ್ಯಾಮಾನಕ್ಕೆ ಜಾಹೀರಾತು ನೀಡಿದವರಿಗೆ ಈ ಸಂದರ್ಭ ವಿಶೇಷ ಕೃತಜ್ಞತೆಗಳನ್ನು ಸಮರ್ಪಿಸುತ್ತಿದ್ದೇವೆ. ವೀಕ್ಷಣೆ ಮಾಡಿದ ವೀಕ್ಷಕರಿಗೂ ಪ್ರೀತಿಯ ಧನ್ಯವಾದಗಳು.
ಮೂರು ಲಿಂಕ್‌ನಲ್ಲಿ `ವಿದ್ಯಾಮಾನ’ ಕಂಬಳವನ್ನು ನೇರ ಪ್ರಸಾರ ಮಾಡಿತ್ತು. ಮೊದಲ ಲಿಂಕ್ ನಲ್ಲಿ ೪೩೪೯೬, ಎರಡನೇ ಲಿಂಕ್‌ನಲ್ಲಿ ೩೨೨೩೪ ಹಾಗೂ ಮೂರನೇ ಲಿಂಕ್‌ನಲ್ಲಿ ೬೪೯೭೦ ವ್ಯೂಸ್ ದಾಖಲಿಸಿದೆ. ಒಟ್ಟು ೧೪೦೭೦೨ ಮಂದಿ ವಿದ್ಯಾಮಾನದ ನೇರ ಪ್ರಸಾರವನ್ನು ವೀಕ್ಷಣೆ ಮಾಡುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಿದ್ದಾರೆ. ಕಳೆದ ವರ್ಷ ಕಂಬಳದ ನೇರ ಪ್ರಸಾರವನ್ನು ಪ್ರಾಯೋಗಿಕ ನೆಲೆಯಲ್ಲಿ `ವಿದ್ಯಾಮಾನ’ ನಡೆಸಿತ್ತು. ಆಗಲೂ ೪೨೦೦೦ ವ್ಯೂಸ್ ಪಡೆದಿತ್ತು.
ವಿಶೇಷ ಅಭಿನಂದನೆಗಳು; ನಾವು ಈ ಮೆಟ್ಟಲನ್ನು ಏರುವಲ್ಲಿ ನಮ್ಮ ಜತೆಗೆ ನಿಂತಿರುವ ಜಾಹೀರಾತುದಾರರು ಹಾಗೂ ವೀಕ್ಷಕರಿಗೆ `ವಿದ್ಯಾಮಾನ’ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತಿದೆ. ಮುಂದೆಯೂ ನಿಮ್ಮ ಸಹಕಾರ ಬೆಂಬಲ ನಮ್ಮ ಜತೆ ಸದಾ ಇರುತ್ತದೆ ಎಂದು ಭಾವಿಸುತ್ತೇವೆ… ಥ್ಯಾಂಕ್ಯೂ ವೆರಿಮಚ್.. ಫಾರ್ ಯು..
