ಭಾ ರತೀಯ ಕ್ರಿಕೆಟ್ (Team India) ತಂಡದ ಲೆಗ್ ಸ್ಪಿನ್ನರ್ ಯುಜವೇಂದ್ರ ಚಹಲ್ (Yuzvendra Chahal -Dhanashree) ) ಮತ್ತು ಧನಶ್ರೀ ವರ್ಮಾ ಅವರ ವಿಚ್ಛೇದನ ಗುರುವಾರ, ಮಾರ್ಚ್ 20, 2025ರಂದು ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ಅಂತಿಮಗೊಂಡಿದೆ. ಈ ವಿಚ್ಛೇದನದ ಭಾಗವಾಗಿ ಚಹಲ್ ಅವರು ಧನಶ್ರೀ ವರ್ಮಾಗೆ 4.75 ಕೋಟಿ ರೂ ಜೀವನಾಂಶವನ್ನು ಪಾವತಿಸಲಿದ್ದಾರೆ.

ಇದರಲ್ಲಿ ರೂ. 2.37 ಕೋಟಿ ಈಗಾಗಲೇ ಪಾವತಿಸಲಾಗಿದೆ. ಆದರೆ, ಈ ದಿನ ಚಹಲ್ ಅವರು ನ್ಯಾಯಾಲಯಕ್ಕೆ ಆಗಮಿಸಿದಾಗ ಮತ್ತು ಹೊರಡುವಾಗ ಧರಿಸಿದ್ದ ಟೀ-ಶರ್ಟ್‌ನ ಸಂದೇಶ ನೆಟ್ಟಿಗರ ಗಮನ ಸೆಳೆಯುತ್ತಿದೆ.

ಚರ್ಚೆಗೀಡಾದ ಚಹಲ್ ಟೀ ಶರ್ಟ್ ಬರಹ

ಚಹಲ್ ನ್ಯಾಯಾಲಯಕ್ಕೆ ಬಂದಾಗ ಕಪ್ಪು ಬಣ್ಣದ ಜಾಕೆಟ್ ಮತ್ತು ಮಾಸ್ಕ್ ಧರಿಸಿ ಮುಖವನ್ನು ಬಂದಿದ್ದರು. ಆದರೆ, ಕೋರ್ಟ್‌ನಿಂದ ಹೊರಬಂದಾಗ ಜಾಕೆಟ್ ತೆಗೆದಾಗ ಅವರ ಟೀ-ಶರ್ಟ್‌ನ ಮೇಲೆ ಬರೆದಿದ್ದ “Be Your Own Sugar Daddy” ಎಂಬ ಇಂಗ್ಲಿಷ್ ಸಂದೇಶ ಸಖತ್ ಚರ್ಚೆಗೆ ಕಾರಣವಾಯಿತು.”Be Your Own Sugar Daddy” ಎಂಬ ಇಂಗ್ಲಿಷ್ ಶೀರ್ಷಿಕೆ ಅರ್ಥ “ನೀನೇ ನಿನಗೆ ಸಂಪತ್ತು ಮತ್ತು ಸೌಲಭ್ಯಗಳನ್ನು ಒದಗಿಸುವವನಾಗು” ಎಂದಾಗುತ್ತದೆ

ಸುಗರ್ ಡ್ಯಾಡಿ ಪದದ ಅರ್ಥ

ಸಾಮಾನ್ಯವಾಗಿ “ಸುಗರ್ ಡ್ಯಾಡಿ” ಎಂದರೆ ಶ್ರೀಮಂತ ವ್ಯಕ್ತಿಯೊಬ್ಬ ತನ್ನ ಹಣ ಅಥವಾ ಉಡುಗೊರೆಗಳ ಮೂಲಕ ಸಂಗಾತಿಯನ್ನ ಪಡೆಯುವವನು ಎಂಬ ಅರ್ಥವಿದೆ. ಚಹಲ್ ಈ ಟೀ-ಶರ್ಟ್ ಧರಿಸಿರುವುದು ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಎಂಬುದು ಗೊತ್ತಿಲ್ಲವಾದರೂ, ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!