ಪುತ್ತೂರು: ಕಾರಣಿಕ ಪ್ರಸಿದ್ದ  ಪುತ್ತೂರು ಶ್ರೀಮಹಾಲೀಂಗೇಶ್ವರ ದೇವಸ್ಥಾನದ ಜಾತ್ರಾರಂಭಕ್ಕೆ ಕೆಲವು ದಿನಗಳಷ್ಟೇ ಬಾಕಿ ಉಳಿದಿದ್ದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ನೇತ್ರತ್ವದಲ್ಲಿ ಸಿದ್ದತೆಗಳು ಭರದಿಂದ ಸಾಗುತ್ತಿದೆ. ಜಾತ್ರೋತ್ಸವದ ಸಂದರ್ಭ ಭಕ್ತಾದಿಗಳಿಗೆ ಅನ್ನಪ್ರಸಾದ ನೀಡಲು ದೇವಸ್ಥಾನದ ಹಿಂಬದಿಯಲ್ಲಿರುವ ಕೆರೆಯ ಪಕ್ಕದಲ್ಲಿರುವ ವಿಶಾಲ ಖಾಲಿ ಜಾಗದಲ್ಲಿ ತಾತ್ಕಲಿಕ ಅನ್ನಛತ್ರ ನಿರ್ಮಿಸಲು  ವ್ಯವಸ್ಥಾಪನ ಸಮಿತಿ ನಿರ್ಧರಿಸಿದ್ದು,ಇದಕ್ಕೆ ಚಪ್ಪರ ಮುಹೂರ್ತ   ದೇವಸ್ಥಾನದಲ್ಲಿ ಬೆಳಗ್ಗಿನ ಪೂಜೆ, ನಿತ್ಯ ಬಲಿ ನಡೆದ  ಬಳಿಕ ಮಾ. 24 ರಂದು ಬೆಳಿಗ್ಗೆ ನಡೆಯಿತು
ಕೆರೆಯ ಪಕ್ಕದಲ್ಲಿ ದೇಗುಲದ ಹೆಸರಿನಲ್ಲಿದ್ದ ಜಮೀನಿನಲ್ಲಿ ಹಲವು ದಶಕಗಳಿಂದ ಮನೆ ಕಟ್ಟಿಕೊಂಡಿದವರನ್ನು ತೆರವುಗೊಳಿಸುವ ಕಾರ್ಯ ಎರಡು ತಿಂಗಳ ಹಿಂದೆ ನಡೆದಿತ್ತು. ಇದಾದ ಬಳಿಕ ನಡೆಯುತ್ತಿರುವ ಮೊದಲು ಜಾತ್ರೆಗೆ ಅಲ್ಲಿ ಅನ್ನಛತ್ರ ನಿರ್ಮಿಸುವ ಮಹತ್ವದ ನಿರ್ಧಾರವನ್ನು ದೇವಸ್ಥಾನದ ಆಡಳಿತ ಮಂಡಲಿ ತೆಗೆದುಕೊಂಡಿದೆ. ಕೆರೆಯಲ್ಲಿ ನೀರು ಉಕ್ಕಿ ಬಂದು ಅಲ್ಲಿ ಬಿದ್ದಿದ್ದ ಅನ್ನದ ಅಗುಲುಗಳುಮುತ್ತಾಗಿ ಪರಿವರ್ತನೆಗೊಂಡ ಐತಿಹ್ಯವಿರುವ ದೇವರ ಕೆರೆಯ ಪಕ್ಕದಲ್ಲೇ ಶ್ರೀಮಹಾದೇವನ ಜಾತ್ರೋತ್ಸವದ ಅನ್ನದಾನ ನಡೆಯಲಿರುವುದುಈ ಬಾರಿಯ ಜಾತ್ರೋತ್ಸವದ ವಿಶೇಷವಾಗಿರಲಿದೆ.
ಕೆರೆಯ ಎಡಭಾಗದಲ್ಲಿ ಹಾಗೂ ದೇವರ ಕೆರೆಯಲ್ಲಿರುವ ಕಟ್ಟೆಗೆ ಸಮಾನಂತರವಾಗಿರುವ ಸ್ಥಳದಲ್ಲಿ ದೇವಳದ ಪ್ರಧಾನ ಅರ್ಚಕ ವೇ. ಮೂ. ವಸಂತ ಕೆದಿಲಾಯರವರು ಚಪ್ಪರ ಮುಹೂರ್ತದ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ಬಳಿಕ ಆರ್ಚಕರು ಹಾಗೂ ಈಶ್ವರ ಭಟ್ ಪಂಜಿಗುಡ್ಡೆರವರು ಒಡೆದ ತೆಂಗಿನಕಾಯಿ ಶುಭ ಶಕುನ ತೋರಿಸಿ ದೈವ ಬೆಂಬಲ ಸೂಚಿಸಿದೆ  
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ವಿನಯ ಸುವರ್ಣ,ಈಶ್ವರ ಬೇಡೆಕರ್, ಸುಭಾಶ್ ರೈ ಬೆಳ್ಳಿಪ್ಪಾಡಿ, ಕೃಷ್ಣವೇಣಿ ಅವರು ಚಪ್ಪರ ಮುಹೂರ್ತ ನೆರವೇರಿಸಿದರು.ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಮಾಜಿ ಸದಸ್ಯೆ ವೀಣಾ ಬಿ.ಕೆ, ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ಉದ್ಯಮಿಗಳಾದ ಕರುಣಾಕರ ರೈ ದೇರ್ಲ, ನುಳಿಯಾಲು ರವೀಂದ್ರ ಶೆಟ್ಟಿ ಮತ್ತಿತ್ತರರು ಉಪಸ್ಥಿತರಿದ್ದರು.
ಅನ್ನಛತ್ರದ ವಿಶೇಷತೆ
300ಅಡಿ ಉದ್ದ ಹಾಗೂ  ಸುಮಾರು 70 ಅಡಿ ಅಗಲದ ಜಾಗವನ್ನು ಈ ಬಾರಿ ಅನ್ನ ಪ್ರಸಾದ ವಿತರಣೆಗೆ ಮೀಸಲಿಡಲಾಗಿದೆ  ಸರಿ ಸುಮಾರು 20 ಸಾವಿರ ಚದರ ಅಡಿ ವಿಸ್ತೀರ್ಣದ ಈ ವಿಶಾಲ ಜಾಗದಲ್ಲಿ  ಪಾಕಶಾಲೆ, ಉಗ್ರಾಣ,  ತರಕಾರಿ ಹೆಚ್ಚಲು ಕೊಠಡಿ, ಬಾಣಸಿಗರಿಗೆ ಹಾಗೂ ಸಿಬ್ಬಂದಿಗಳಿಗೆ ವಿಶ್ರಾಂತಿ ಕೊಠಡಿ ಹಾಗೂ ತಾತ್ಕಲಿಕ ಶೌಚಲಯ ನಿರ್ಮಿಸಲಾಗುತ್ತದೆ ವಿಶೇಷ ಆಹ್ವಾನಿತರಿಗೆ ಅನ್ನಪ್ರಸಾದ ವಿತರಿಸಲು ಅನುಕೂಲವಾಗುವಂತೆ 100 ಆಸನ ವ್ಯವಸ್ಥೆಯಿರುವ ಕೌಂಟರ್, ಅಶಕ್ತರಿಗೆ ಹಾಗೂ ವೃದ್ದರಿಗೆ ಕುಳಿತು ಊಟ ಮಾಡಲು ಅವಕಾಶ ಕಲ್ಪಿಸಲು 100 ಆಸನ ವ್ಯವಸ್ಥೆಯಿರುವ ಕೌಂಟರನ್ನು ಇದೇ ಜಾಗದಲ್ಲಿ ನಿರ್ಮಿಸಲಾಗುತ್ತದೆ  ಉಳಿದ ಜಾಗದಲ್ಲಿ ಬಫೆ ಊಟದ ವ್ಯವಸ್ಥೆಯನ್ನು ಮಾಡುವ ಯೋಚನೆಯನ್ನು ಆಡಳಿತ ಮಂಡಲಿ ಹೊಂದಿದೆ     
ಪಂಜಿಗುಡ್ಡೆ ಈಶ್ವರ ಭಟ್ ಹೇಳಿದ್ದೇನು ?
ಸೋಮವಾರ, ಶಿವನಿಗೆ ತುಂಬಾ ಪ್ರಿಯವಾದ  ದಿನವಾಗಿದ್ದು ಈ ದಿನ ಚಪ್ಪರ ಮುಹೂರ್ತ ನಡೆದಿದೆ ಹಾಗೂ 2 ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಾಣದ ಕೆಲಸ ಸಹ ಆರಂಭಗೊಂಡಿದ್ದು ಈ ಕೆಲಸ ನಾಲ್ಕು-ಐದು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ವೈದಿಕರಿಗೆ, ಉಗ್ರಾಣದ ವ್ಯವಸ್ಥೆ ಹಾಗೂ ವಿಐಪಿಗಳಿಗೆ ಇಲ್ಲಿ ಊಟ, ಕಾಫಿ, ತಿಂಡಿಯ ವ್ಯವಸ್ಥೆ ಬಹಳ ಅಚ್ಚುಕಟ್ಟಾಗಿ ವ್ಯವಸ್ಥಿತ ರೀತಿಯಲ್ಲಿ ನಡೆಯಲಿದೆ.
ತಂತ್ರಿವರ್ಗದವರಿಗೆ, ಅರ್ಚಕರಿಗಾಗಿ 10ರಿಂದ 30 ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಕೂಡಾ ಮಾಡಲಿದ್ದೇವೆ. ನಟರಾಜ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.  ಇದರಿಂದಾಗಿ ಮೊದಲು ಅನ್ನದಾನ ನಡೆಯುತ್ತಿದ್ದ ಜಾಗ ಅಂಗಡಿ ಇಡಲು ಮತ್ತು ಜಾತ್ರೆಯನ್ನು ವೀಕ್ಷಿಸಲು  ಉಪಯೋಗವಾಗಲಿದೆ.    ಈ ಎಲ್ಲಾ ಕಾರ್ಯಗಳಿಗೆ ಮಹಾಲಿಂಗೇಶ್ವರ ದೇವರ ಸಂಪೂರ್ಣ ಅನುಗ್ರಹವಿದೆ ಎನ್ನುವುದು ತೆಂಗಿನ ಕಾಯಿ ಒಡೆಯುವ ವೇಳೆ ಕಂಡು ಬಂದ ಶಕುನದಲ್ಲಿ ವಿದಿತವಾಗಿದೆ

Leave a Reply

Your email address will not be published. Required fields are marked *

Join WhatsApp Group
error: Content is protected !!