ಪುತ್ತೂರು; ಪುತ್ತೂರು ಬಿಜೆಪಿ ವತಿಯಿಂದ ಪುತ್ತೂರು ದರ್ಬೆ ವೃತ್ತದಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರು ಮತ್ತು ಪ್ರತಿಭಟನಾ ನಿರತರ ನಡುವೆ ಪರಸ್ಪರ ತಳ್ಳಾಟ ನಡೆದು ಗೊಂದಲ ಸೃಷ್ಟಿಯಾದ ಘಟನೆ ಮಂಗಳವಾರ ಸಂಜೆ ನಡೆಯಿತು.
ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಸಂಬAಧಿಸಿ ಪುತ್ತೂರು ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ಸಂದರ್ಭ ಪ್ರತಿಕೃತಿ ದಹನಕ್ಕೆ ಪ್ರತಿಭಟನಾಕಾರರು ಪ್ರಯತ್ನಿಸಿದ್ದು, ನ್ಯಾಯಾಲಯ ಆದೇಶದಂತೆ ಪ್ರತಿಕೃತಿ ದಹನ ಮಾಡಬಾರದು ಎಂದು ಪೊಲೀಸರು ತಿಳಿಸಿದರು. ಆದರೆ ಡಿ.ಕೆ.ಶಿವಕುಮಾರ್ ಭಾವಚಿತ್ರದ ಪ್ರತಿಕೃತಿ ದಹನಕ್ಕೆ ಪ್ರತಿಭಟನಾಕಾರರು ಮುಂದಾದಾಗ ಪೊಲೀಸರು ತಡೆಯಲು ಯತ್ನಿಸಿದರು. ಈ ಸಂದರ್ಭ ಪೊಲೀಸರು ಮತ್ತು ಪ್ರತಿಭಟನಾಕಾರ ನಡುವೆ ಮಾತಿನ ಚಕಮುಕಿ ಹಾಗೂ ನೂಕಾಟ ತಳ್ಳಾಟ ನಡೆಯಿತು.  ಈ ಸಂದರ್ಭದಲ್ಲಿ ಮಧ್ಯಪ್ರವೇಶಿದ ಮಾಜಿ ಶಾಸಕ ಸಂಜೀವ ಮಠಂದೂರು ಹಾಗೂ ಕಾರ್ಯಕರ್ತರು  ಪೊಲೀಸರ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರು ಪ್ರತಿಕೃತಿಯನ್ನು ಪೊಲೀಸರ ಕೈಯಿಂದ ಎಳೆದುಕೊಂಡು ರಸ್ತೆ ಮಧ್ಯೆ ಪ್ರತಿಕೃತಿಗೆ ಬೆಂಕಿ ಹಚ್ಚಿ ಘೋಷಣೆಗಳನ್ನು ಕೂಗಿದರು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಸರಕಾರಿ ಗುತ್ತಿಗೆಯಲ್ಲಿ 4 ಶೇ. ಮೀಸಲಾತಿಗೆ ಕಾಂಗ್ರೆಸ್ ಮುಂದಾಗಿರುವುದು ಕಾಂಗ್ರೆಸ್‌ನ ಡಿ.ಎನ್.ಎ. ಏನು ಎಂದುದನ್ನು ಮತ್ತೆ ಸಾಭೀüತುಪಡಿಸಿದೆ. ಈ ಸರಕಾರ ೧೦೦ ಶೇ. ಭ್ರಷ್ಟಾಚಾರಿ ಸರಕಾರ, ಅಲ್ಪಸಂಖ್ಯಾತ ತುಷ್ಟೀಕರಣದ ಸರಕಾರ ಎಂದು ಆರೋಪಿಸಿದರು. ವಿಧಾನಪರಿಷತ್ ಸದಸ್ಯೆ ಭಾರತೀ ಶೆಟ್ಟಿ ಮಾತನಾಡಿ, ಮುಸಲ್ಮಾನರಿಗಾಗಿ ಸಂವಿಧಾನ ಬದಲಾಯಿಸಲು ಹೊರಟ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಬಿಜೆಪಿ ಪುತ್ತೂರು ವತಿಯಿಂದ ದರ್ಬೆ ವೃತ್ತದ ಬಳಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಆಂಧ್ರಪ್ರದೇಶ, ಪಶ್ಚಿಮ ಬಂಗಾಳಗಳಲ್ಲಿ ಇಂತಹ ಕೆಟ್ಟ ಪ್ರಯತ್ನಗಳಿಗೆ ಕೋರ್ಟ್ ಮೂಲಕ ಹಿನ್ನಡೆಯಾಗಿದೆ. ಕರ್ನಾಟಕದಲ್ಲೂ ಇಂತಹ ಮುಸಲ್ಮಾನ್ ಓಲೈಕೆಯ ಪ್ರಯತ್ನಗಳಿಗೆ ನಾವು ಬಿಡುವುದಿಲ್ಲ ಎಂದು ಹೇಳಿದರು.
ಭಾರತ ದೇಶದ ಭೂಪಟ ಬದಲಾಯಿಸಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ಧರ್ಮಗಳು, ಜಾತಿ ಮಧ್ಯೆ ಕಲಹಗಳಿಗೆ ಬೆಂಬಲ ಮಾಡಿದ ಕೀರ್ತಿಯೂ ಅವರಿಗೇ ಸಲ್ಲುತ್ತದೆ. ಅಖಂಡ ಭಾರತ ಕನಸು ಒಡೆದು, ಜಾತಿಗಳನ್ನು ಒಡೆಯುವ ಕೆಲಸ ನಿರಂತರವಾಗಿ ಕಾಂಗ್ರೆಸ್ ಪಕ್ಷದ ಮೂಲಕ ನಡೆಯುತ್ತಿದೆ. ಬಜೆಟ್‌ನಲ್ಲಿ ಮುಸ್ಲಿಂ ಸಮುದಾಯಕ್ಕೆ ದೊಡ್ಡ ಅನುದಾನ, ಮುಸ್ಲಿಂ ಮಹಿಳೆಯರಿಗೆ ೨೫ ಸಾವಿರ ಮಂದಿಗೆ ಆತ್ಮ ರಕ್ಷಣೆಗೆ ಅನುದಾನ ಘೋಷಿಸಿದ್ದಾರೆ. ಲವ್ ಜಿಹಾದ್ ಸೇರಿದಂತೆ ನಿರಂತರವಾಗಿ ಅನ್ಯಾಯ ಆಗುತ್ತಿರುವುದು ಹಿಂದೂ ಹೆಣ್ಣುಮಕ್ಕಳಿಗೆ. ಆದರೆ ಅನ್ಯಾಯ ಆಗದ ಮುಸ್ಲಿಂ ಮಹಿಳೆಯರಿಗೆ ಆತ್ಮರಕ್ಷಣೆಯ ಬೆಂಬಲ ನೀಡುವುದು ಯಾವ ನ್ಯಾಯ ಎಂದು ಭಾರತೀ ಶೆಟ್ಟಿ ಪ್ರಶ್ನಿಸಿದರು.
ಹೃದಯದಲ್ಲಿ ಹಿಂದುತ್ವ
ಕಾAಗ್ರೆಸ್‌ನಲ್ಲಿ ಇದ್ದು ಹಿಂದೂಗಳ ಬಗ್ಗೆ ಯಾವ ಕೆಲಸ ಮಾಡಿದ್ದೀರಿ ಎಂದು ಪ್ರಶ್ನಿಸಿದ ಭಾರತೀ ಶೆಟ್ಟಿ, ಹೆಂಚು ತೆಗೆಯುವಾಗ ಕೇಸರಿ ಶಾಲು ಹಾಕುವುದು ಮಾತ್ರ ಹಿಂದುತ್ವವಲ್ಲ. ಕೇಸರಿ ಹಿಂದುತ್ವ ಹೃದಯದಲ್ಲಿ ಇರಬೇಕು. ಡಾ. ಅಂಬೇಡ್ಕರ್ ಸಾಯುವಾಗ ಮೂರಡಿ ಜಾಗ ಕೊಡದವರು ನೀವು. ನಿಮ್ಮ ಸರಕಾರ ನೀವು ನಡೆಸುತ್ತಿಲ್ಲ, ಅಲ್ಪ ಸಂಖ್ಯಾತರು ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿ, ೫ ಬಿಟ್ಟಿ ಗ್ಯಾರಂಟಿ ಮೂಲಕ ಹಿಂದುಗಳಿಗೆ ವಂಚನೆ ಮಾಡಿದವರು ಕಾಂಗ್ರೆಸ್‌ನವರು. ದೇಶ ರಕ್ಷಕರನ್ನು ಹುಟ್ಟುಹಾಕುವ ಅರೆಸ್ಸೆಸ್ ವಿರುದ್ಧ ನಿರಂತರ ದೂರುತ್ತಾರೆ. ಆದರೆ ನಿರಂತರ ಗಲಭೆಗಳನ್ನು ಉಂಟುಮಾಡುವವರಿಗೆ, ಪಾಕಿಸ್ತಾನ ಜಿಂದಾಬಾದ್ ಕೂಗಿದವರಿಗೆ ಕಾಂಗ್ರೆಸ್ ಸರಕಾರ ಬೆಂಬಲ ನೀಡುತ್ತಲೇ ಬಂದಿದೆ. ಯಾವುದೇ ಕಾರಣಕ್ಕೂ ಸಂವಿಧಾನ ಬದಲಾವಣೆಗೆ ಇವರಿಗೆ ಅವಕಾಶ ನೀಡುವುದಿಲ್ಲಎಂದು ಎಚ್ಚರಿಸಿದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್, ಉಪಾಧ್ಯಕ್ಷ ಬಾಲಚಂದ್ರ ವಿ.ಹಿಂ.ಪ. ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ, ಪುತ್ತೂರು ಪ್ರಖಂಡ ಅಧ್ಯಕ್ಷ ದಾಮೋಧರ ಪಾಟಲಿ, ಪ್ರಮುಖರಾದ ಬೂಡಿಯಾರು ರಾಧಾಕೃಷ್ಣ ರೈ, ಚಂದ್ರಶೇಖರ್ ರಾವ್ ಬಪ್ಪಳಿಗೆ, ರಾಜೇಶ್ ಬನ್ನೂರು, ನಾಗೇಶ್ ಕೆಮ್ಮಾಯಿ, ದೀಕ್ಷಾ ಪೈ, ಗೌರಿ ಬನ್ನೂರು, ಸ್ವರ್ಣಲತಾ ಹೆಗ್ಡೆ, ಯಶಸ್ವಿನಿ ಶಾಸ್ತಿçÃ, ನಾಗೇಶ್ ಪ್ರಭು, ವಿದ್ಯಾಧರ ಜೈನ್, ನಾರಾಯಣ ಪ್ರಕಾಶ್, ಸೀತಾರಾಮ ಶೆಟ್ಟಿ ಕೆದಂಬಾಡಿಗುತ್ತು, ಮುರಳಿಕೃಷ್ಣ ಹಸಂತಡ್ಕ, ಹರೀಶ್ ಬಿಜತ್ರೆ, ಲಕ್ಷ÷್ಮಣ ಕೋಡಿಂಬಾಡಿ, ಅನಿಲ್ ತೆಂಕಿಲ, ಮಹೇಶ್ ಕೇರಿ, ಸುನೀಲ್ ದಡ್ಡು, ಪುರುಷೋತ್ತಮ ಮುಂಗ್ಲಿಮನೆ, ಶಶಿಕುಮಾರ್ ಬಾಲ್ಯೊಟ್ಟು, ಸಂತೋಷ್ ರೈ ಕೈಕಾರ, ವಸಂತ ಲಕ್ಷಿ÷್ಮ, ರಾಮಚಂದ್ರ ಕಾಮತ್, ಸಂತೋಷ್ ರೈ ಕೈಕಾರ ಸೇರಿದಂತೆ ನೂರಾರು ಮಂದಿ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡರು.
ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ನಾಗೇಶ್ ಕೆಮ್ಮಾಯಿ ಕಾರ್ಯಕ್ರಮ ನಿರ್ವಹಿಸಿದರು.

 

Leave a Reply

Your email address will not be published. Required fields are marked *

Join WhatsApp Group
error: Content is protected !!