ಪ್ರತಿ ಲೀಟರ್ ನಂದಿನಿ ಹಾಲಿನ ದರ ರೂ.4ಕ್ಕೆ ಏರಿಕೆ ಮಾಡಲು ಈಗಾಗಲೇ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ಏ.1ರಿಂದಲೇ ಹೊಸ ದರ ಜಾರಿಗೆಗೆ ಆದೇಶಿಸಲಾಗಿದೆ.

ಈ ಕುರಿತು ವಿಕಾಸಸೌಧದಲ್ಲಿ ಮಾಹಿತಿ ನೀಡಿರುವ ಪಶು ಸಂಗೋಪನ ಸಚಿವ ಕೆ ವೆಂಕಟೇಶ್ ಅವರು, ಏಪ್ರಿಲ್ ಒಂದರಿಂದ ಪರಿಷ್ಕೃತ ದರ ಅನ್ವಯವಾಗಲಿದೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದರು.

ರೈತರ ಒತ್ತಾಯಕ್ಕೆ ದರವನ್ನು ಹೆಚ್ಚಳ ಮಾಡಲಾಗಿದ್ದು, ಹೆಚ್ಚಾಳವಾಗಿರುವ ದರ ರೈತರಿಗೆ ನೀಡುತ್ತೇವೆ ಎಂದು ಸ್ಪಷ್ಟನೆ ನೀಡಿದರು.

ಇತ್ತೀಚೆಗೆ ಕನಿಷ್ಠ ರೂ.5-10ರವರೆಗೆ ಪ್ರತಿ ಲೀಟರ್ ಹಾಲಿನ ದರ ಏರಿಕೆ ಮಾಡಬೇಕು ಎಂದು ಹಾಲು ಒಕ್ಕೂಟಗಳ ನಿಯೋಗವು ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದವು. ಅದರಂತೆಯೇ ಇಂದು ಸಚಿವ ಸಂಪುಟ ಸಭೆಯಲ್ಲಿ ಅಧಿಕೃತವಾಗಿ ಅನುಮೋದನೆ ನೀಡಲಾಗಿದೆ.

ರೈತರಿಗೆ ಪಶು ಪಾಲನೆಗೆ ಹೆಚ್ಚು ವೆಚ್ಚ, ಸಾಮಗ್ರಿಗಳ ಬೆಲೆ ಏರಿಕೆಯಿಂದ ಹಾಲಿನ ದರವೂ ಹೆಚ್ಚಿಸುವುದು ಅನಿವಾರ್ಯ ಎಂದು ಒಕ್ಕೂಟಗಳು ಬೇಡಿಕೆ ಇಟ್ಟಿದ್ದವು. ಈ ಹಿನ್ನೆಲೆಯಲ್ಲಿ ದರ ಹೆಚ್ಚಳ ಮಾಡಲಾಗಿದೆ.

ರೂ.42 ಇರುವ ಪ್ರತಿ ಲೀಟರ್ ನೀಲಿ ಪ್ಯಾಕೆಟ್ ದರ ಏ.1ರಿಂದ 46ಕ್ಕೆ ಏರಿಕೆಯಾದರೆ, ಅದೇ ರೀತಿ ಟೋನ್ಡ್ ಹಾಲು ರೂ.43-47ಕ್ಕೆ, ಹಸುವಿನ ಹಾಲು 46 ರಿಂದ ರೂ.50ಕ್ಕೆ, ಶುಭಂ (ಕೇಸರಿ ಪ್ಯಾಕೆಟ್) ರೂ. 48 ರಿಂದ 52ಕ್ಕೆ, ಹಸುವಿನ ಹಾಲು ರೂ.46 ರಿಂದ 50ಕ್ಕೆ ಹಾಗೂ ಮೊಸರು 50 ರಿಂದ ರೂ.54ಕ್ಕೆ ಏರಿಕೆಯಾಗಲಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!