src="https://vidyamaana.com/wp-content/uploads/2024/09/gl-today-1.jpeg" alt="" width="1810" height="2560" />

ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಿಗೆ ನೀಡುವ ಗೌರವ ಧನವನ್ನು ಪದ್ಮನಾಭ ನಗರ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಮೋದ್ ಶ್ರೀನಿವಾಸ್ ಸರಕಾರಕ್ಕೆ ವಾಪಸ್ ನೀಡಲು ಮುಂದಾಗಿದ್ದಾರೆ.

ಕುರಿತು ಗ್ಯಾರಂಟಿ ಅನುಷ್ಠಾನ ರಾಜ್ಯ ಸಮಿತಿ ಉಪಾಧ್ಯಕ್ಷರು ಹಾಗೂ ಬಿಬಿಎಂಪಿ ಅಧ್ಯಕ್ಷರಿಗೆ ಪತ್ರದ ಮುಖೇನ ತಿಳಿಸಿರುವ ಪ್ರಮೋದ್ ಶ್ರೀನಿವಾಸ್, ತಮಗೆ ಸರಕಾರ ನೀಡಲು ತೀರ್ಮಾನಿಸಿದ್ದ ಮಾಸಿಕ 25,000 ಸಾವಿರ ರೂಗಳನ್ನು ಸರಕಾರಕ್ಕೆ ವಾಪಸ್ ನೀಡುವುದಾಗಿ ತಿಳಿಸಿದ್ದಾರೆ.

ಸರಕಾರ ನಮಗೆ ಕೊಟ್ಟಿರುವ ಜವಾಬ್ದಾರಿ ಮಹತ್ವದ್ದಾಗಿದ್ದು, ಈ ಹೊಣೆಗಾರಿಕೆ ಬಡ, ಮಧ್ಯಮ ವರ್ಗದ ಜನರಿಗೆ ಸರಕಾರದ ಯೋಜನೆಯನ್ನು ತಲುಪಿಸುವುದಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರದಿಂದ ಸಂಬಳ ಪಡೆದು ಕೆಲಸ ಮಾಡುವುದಕ್ಕಿಂತ ಜನರ ಸೇವೆ ಮಾಡುವುದು ನನ್ನ ಗುರಿ ಎಂದು ತಿಳಿಸಿದ್ದಾರೆ.

ಸರಕಾರ ಗೌರವಧನ ಎಂದು ಕೇವಲ ಒಂದು ರುಪಾಯಿ ಮಾತ್ರವೇ ನೀಡಲಿ, ನಾನು ಅದನ್ನು ಗೌರವದಿಂದ ಸ್ವೀಕಾರ ಮಾಡುತ್ತೇನೆ. 25 ಸಾವಿರ ರೂಪಾಯಿ ಮಾಸಿಕ ವೇತನವನ್ನು ಸರಕಾರ ಬೇರೆ ಯಾವುದಾದರೂ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲಿ ಎಂಬುದು ನನ್ನ ಆಶಯ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!