



ಸುಪ್ರೀಂಕೋರ್ಟ್ ಬುಧವಾರ ಮಹತ್ವದ ಆದೇಶ ಪ್ರಕಟಿಸಿದ್ದು , ಕೇರಳದ RSS ಮುಖಂಡನ ಕೊಲೆ ಸಂಬಂಧ PFI ಕಾರ್ಯಕರ್ತರ ಬೇಲ್ ರದ್ಧತಿ ಕೋರಿದ್ದ NIA ಅರ್ಜಿ ವಜಾಗೊಳಿಸಿದೆ.
ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ RSS ನಾಯಕ ಶ್ರೀನಿವಾಸನ್ ಕೊಲೆ ನಡೆದಿತ್ತು.
ಈ ಸಂಬಂಧ NIA ತನಿಖೆ ನಡೆಸುತ್ತಿತ್ತು. ಇದೇ ಕೇಸ್ ವಿಚಾರವಾಗಿ PFI ಕಾರ್ಯಕರ್ತರಿಗೆ ಬೇಲ್ ಮಂಜೂರಾಗಿತ್ತು.
ನ್ಯಾಯಮೂರ್ತಿಗಳಾದ ಅಭಯ್ ಓಕಾ ಹಾಗೂ ಕೋಟಿಶ್ವರ್ ಸಿಂಗ್ ನೇತೃತ್ವದ ಪೀಠ ಬೇಲ್ ಮಂಜೂರು ಮಾಡಿ 1 ವರ್ಷ ಕಳೆದಿದೆ. ಬೇಲ್ ಮಂಜೂರು ವಿಚಾರವಾಗಿ ನಿಯಮ ಉಲ್ಲಂಘನೆ ಮಾಡಿದ್ರೆ ಮಾತ್ರ ಬೇಲ್ ರದ್ದು ಮಾಡಬಹುದು ಇಲ್ಲವಾದಲ್ಲಿ ಅದು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರಕರಣದ ಗಂಭೀರತೆ ಅರಿತು ವಿಚಾರಣೆ ಕೈಗೆತ್ತಿಕೊಂಡಿದ್ದೆವು. ಆದ್ರೆ ಬೇಲ್ ರಿಜೆಕ್ಟ್ ಮಾಡುವಂತಹ ಯಾವುದೇ ಅಂಶ ನಮಗೆ ಕಂಡುಬಂದಿಲ್ಲ .ಹೀಗಾಗಿ ಯಥಾಸ್ಥಿತಿ ಕಾಯ್ದುಕೊಳ್ಳುವೆವು ಎಂದು ಸುಪ್ರೀಂ ಹೇಳಿದೆ.
NIA ಗೆ ಇದರ ಬಗ್ಗೆ ತಕರಾರು ಇದ್ದಲ್ಲಿ ಸೂಕ್ತ ದಾಖಲೆಗಳನ್ನು ಮರುಪರಿಶೀಲಿಸಿ ಮತ್ತೊಮ್ಮೆ ನ್ಯಾಯಾಲಯಕ್ಕೆ ಸಲ್ಲಿಸಿ ಬೇಲ್ ರದ್ಧತಿಗೆ ಅರ್ಜಿ ಸಲ್ಲಿಸಬಹುದು ಎಂದು ಕೋರ್ಟ್ ಹೇಳಿದೆ
