
ಪತ್ನಿಯೊಂದಿಗೆ ಹಾಲು ಮಾರುವವನು ಅಕ್ರಮ ಸಂಬಂಧ ಹೊಂದಿದ್ದಾನೆಂದು ಶಂಕಿಸಿದ ವ್ಯಕ್ತಿಯೋರ್ವನು ಮಟನ್ ಕಟ್ ಮಾಡುವ ಹರಿತ ಮಚ್ಚಿನಿಂದ ಕೊಚ್ಚಿ ಕೊಂದು ಹಾಕಿರುವ ಘಟನೆ ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ನಡೆದಿದೆ.
ಮೊಹಮ್ಮದ್ ಮೊಬಿನ್ ಜೈಪಾಲ್ ಎಂಬುವವನು ಕುರಿ ಮಾಂಸ ಕತ್ತರಿಸುವ ಆಯುಧದಿಂದ ಹೊಡೆದು ಕೊಲೆಗೈದಿರುವ ಭಯಾನಕ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹಾಲು ವ್ಯಾಪಾರಿ ತನ್ನ ಏರಿಯಾದಲ್ಲಿ ಬಂದಾಗ ಪಕ್ಕಾ ಪ್ಲ್ಯಾನ್ ಮಾಡಿ ಮೊಬಿನ್ ಜೈಪಾಲ್ ಅಟ್ಯಾಕ್ ಮಾಡಿದ್ದಾನೆ. ಈ ವೇಳೆ ಕ್ಷಣ ಮಾತ್ರ ಹೆದರಿದ ಜನ ರಕ್ಷಣೆಗೆ ಬಾರದೇ ದೂರದಿಂದಲೇ ನಿಂತು ಘಟನೆ ವೀಕ್ಷಿಸಿದ್ದಾರೆ. ಏ.20ರಂದು ನಡೆದ ಹತ್ಯೆಯ ಘಟನೆಯ ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ






