
ದ.ಕ. ಜಿಲ್ಲೆಯ ಪ್ರಥಮ ತಾರಾ ಹೋಟೆಲ್ ಮೋತಿ ಮಹಲ್‌ನ ಭೂವಿ ವಿವಾದ ಬಗೆಹರಿ ದಿದ್ದು, ಉದ್ಯಮಿ ಎ.ಜೆ. ಶೆಟ್ಟಿ ಅವರು ಸಂತ ಅಂತೋನಿ ಚಾರಿಟೇಬಲ್ ಟ್ರಸ್ಟಿಗೆ ಮೋತಿಮಹಲ್ ಕಟ್ಟಡವನ್ನು ಬುಧವಾರ ಹಸ್ತಾಂತರಿಸಿದರು.
ಮಂಗಳೂರಿನ ಹೃದಯ ಭಾಗದ ಫಳ್ನೀರಿನಲ್ಲಿರುವ ಸುಮಾರು 1.70 ಎಕ್ರೆ ಜಮೀನಿನಲ್ಲಿರುವ ಮೋತಿಮಹಲ್‌ನ್ನು ಸಂತ ಅಂತೋನಿ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕ ವಂದನಿಯ ಫಾ.ಜೆ ಬಿ ಕ್ರಾಸ್ತ ಪಡೆದರು ಎಂದು ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ವಂ. ಫಾ. ಜೆ. ಬಿ.ಸಲ್ಡಾನ ತಿಳಿಸಿದ್ದಾರೆ.






