ಶಿರ್ಲಾಲು ಗ್ರಾಮದ ನಂದಗೋಕುಲ ಕಟ್ಟ ಮನೆ ಎಂಬಲ್ಲಿ ಅಪ್ರಾಪ್ತ ವಯಸ್ಸಿನ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ.

ಆರೋಪಿ ಶಿರ್ಲಾಲು ಗ್ರಾಮದ ನಿವಾಸಿ ಸನತ್‌ (28) ಎಂದು ತಿಳಿದುಬಂದಿದೆ.ಆರೋಪಿಯು ಯುವತಿಯ ತಂದೆಯ ಕಾರಿನಲ್ಲಿ ಚಾಲಕನಾಗಿ ದುಡಿಯುತ್ತಿದ್ದು, ಅಗಾಗ್ಗೆ ಮನೆಗೆ ಬಂದವನು ಸಲುಗೆಯಿಂದ ಇದ್ದ.

ಕಳೆದ ವರ್ಷ ಮೇ 22ರಂದು ಅಪ್ರಾಪ್ತ ವಯಸ್ಸಿನ ಯುವತಿಯ ಜನ್ಮದಿನದ ಕಾರ್ಯಕ್ರಮಕ್ಕೆ ಬಂದವನು ರಾತ್ರಿ ಉಳಿದುಕೊಂಡಿದ್ದ. ಈ ವೇಳೆ ಯುವತಿಯೊಂದಿಗೆ ಒತ್ತಾಯಪೂರ್ವಕವಾಗಿ ಲೈಂಗಿಕ ಸಂಪರ್ಕ ನಡೆಸಿದ್ದ. ಅಷ್ಟೇ ಅಲ್ಲದೆ ಪದೇ ಪದೇ ಈ ಕೃತ್ಯ ಎಸಗಿರುವ ಪರಿಣಾಮ ಯುವತಿ ಗರ್ಭವತಿಯಾಗಿದ್ದಳು.

ಈ ಕುರಿತು ಇತ್ತೀಚೆಗೆ ತಾಯಿಯೊಂದಿಗೆ ಉಜಿರೆ ಖಾಸಗಿ ಅಸ್ಪತ್ರೆಗೆ ಚಿಕಿತ್ಸೆಗೆ ಹೋದಾಗ ವೈದ್ಯರು ಪರೀಕ್ಷಿಸಿ 3 ತಿಂಗಳ ಗರ್ಭವತಿ ಎಂದು ತಿಳಿಸಿ ಬೆಳ್ತಂಗಡಿ ಸರಕಾರಿ ಅಸ್ಪತ್ರೆಗೆ ಹೋಗುವಂತೆ ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆಕೆ ಬೆಳ್ತಂಗಡಿ ಸರಕಾರಿ ಅಸ್ಪತ್ರೆಗೆ ದಾಖಲಾಗಿದ್ದಾರೆ. ಯುವತಿ ನೀಡಿದ ದೂರಿನಂತೆ ಆರೋಪಿ ಸನತ್‌ ವಿರುದ್ಧ ವೇಣೂರು ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!