
ವಿಶ್ವದ ದೊಡ್ಡಣ್ಣ ಡೋನಾಲ್ಡ್ ಟ್ರಂಪ್ ಹೊಸ ನಿರ್ಧಾರವೊಂದು ಭಾರತದ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಟ್ರಂಪ್ ಹೊಸ ನೀತಿಯಿಂದ ಭಾರತದಲ್ಲಿ ಔಷಧಿಗಳ ಬೆಲೆ ಗಗನಕ್ಕೇರುವ ಸಾಧ್ಯತೆ ಇದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಿಸ್ಕ್ರಿಪ್ಪನ್ ಔಷಧಿ ಬೆಲೆಗಳನ್ನು ಶೇಕಡಾ 30-80 ರಷ್ಟು ಕಡಿತಗೊಳಿಸುವ ಪ್ಲಾನ್ ಇದೀಗ ಜಾಗತಿಕ ಔಷಧ ಕಂಪನಿಗಳು ಪಾಲಿಗೆ ದೊಡ್ಡ ಹೊಡೆತಗಳನ್ನು ಕೊಡುತ್ತಿದೆ.
ಇದ್ರಿಂದ ಭಾರತದಂತಹ ಕಡಿಮೆ ಮಾರುಕಟ್ಟೆ ವ್ಯಾಪ್ತಿಯ ದೇಶಗಳಲ್ಲಿ ಮೆಡಿಸಿನ್ ಗಳು ಹೆಚ್ಚಿನ ಬೆಲೆಗೆ ನಿಗದಿಯಾಗುವ ಸಾಧ್ಯತೆ ಇದೆ.
ದೊಡ್ಡ ದೊಡ್ಡ ಔಷಧಿ ಕಂಪನಿಗಳು ವ್ಯಾಪಾರ ಮಾತುಕತೆಗಳ ಮೂಲಕ ಪೇಟೆಂಟ್ ಕಾನೂನುಗಳನ್ನು ಬಿಗಿಗೊಳಿಸುವ ಮೂಲಕ ಬೆಳೆಗಳನ್ನು ಹೆಚ್ಚು ಮಾಡೋಕೆ ನಿರ್ಧರಿಸಿವೆ. ಇದು ಮಾರುಕಟ್ಟೆಯ ಮೇಲೆ ತೀವ್ರ ಒತ್ತಡ ಹೇರುತ್ತಿದ್ದು, ಎಲ್ಲಾ ಬಗೆಯ ಔಷಧಿಗಳ ಬೆಲೆ ಏರಿಕೆ ನಿಶ್ಚಿತ ಎನ್ನಲಾಗಿದೆ.
ಔಷಧ ಕಂಪನಿಗಳು ಪಾಶ್ಚಿಮಾತ್ಯ ಮಾರುಕಟ್ಟೆಗಳಲ್ಲಿ ಕಠಿಣ ಬೆಲೆ ಮಿತಿಗಳನ್ನು ಎದುರಿಸುತ್ತಿರುವುದರಿಂದ,ನಷ್ಟವನ್ನು ಸರಿದೂಗಿಸಲು ಭಾರತದಂತಹ ದೇಶಗಳಲ್ಲಿ ಬೆಲೆಗಳನ್ನು ಹೆಚ್ಚಿಸುವ ಪ್ರಯತ್ನಗಳು ಹೆಚ್ಚು ಎಂದು ಅಂತಾರಾಷ್ಟ್ರೀಯ ವಿಶ್ಲೇಷಕರು ಎಚ್ಚರಿಸಿದ್ದಾರೆ.






