
ಇತ್ತೀಚೆಗೆ ಕೂದಲು ಕಸಿ ಮಾಡಿಸಿಕೊಳ್ಳೋದು ಸಿಕ್ಕಾಪಟ್ಟೆ ಟ್ರೆಂಡಿಂಗ್. ಆದ್ರೆ, ಇದೇ ವಿಚಾರ ಇಬ್ಬರ ಜೀವಕ್ಕೆ ಸಂಚಕಾರ ತಂದ ವಿಚಾರ ಈಗ ಬೆಳಕಿಗೆ ಬಂದಿದೆ.
ಸೋಶಿಯಲ್ ಮೀಡಿಯಾದಲ್ಲಿ ಬಂದ ಭಾರೀ ವೈರಲ್ ಆದ ಜಾಹೀರಾತು ಎಂದು ಖಾಸಗಿ ಕ್ಲಿನಿಕ್‌ನಲ್ಲಿ ಕೂದಲು ಕಸಿ ಮಾಡಿಸಿಕೊಂಡ ಇಬ್ಬರು ಇಂಜಿನಿಯರ್ ಯುವಕರು ಸಾವನ್ನಪ್ಪಿದ್ದಾರೆ ಎಂಬ ವಿಚಾರ ದೊಡ್ಡ ಸುದ್ದಿಯಾಗಿದೆ.
ಉತ್ತರ ಪ್ರದೇಶದ ಇಬ್ಬರು ಯುವಕರು ಕೂದಲಿನ ಕಸಿಗಾಗಿ ಕಾನ್ಪುರರ ಖಾಸಗಿ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದಿದ್ದರು. ಕೂದಲು ಕಸಿ ಮಾಡಿದ ನಂತರ ನೋವು, ಊತ ಮುಂತಾದ ಸಮಸ್ಯೆಗಳು ಕಾಣಿಸಿಕೊಂಡಿವೆ. ಕೊನೆಗೆ ವಿಪರೀತ ಉರಿ ತಾಳಲಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
2023 ನವೆಂಬರ್ ನಲ್ಲಿ ಉತ್ತರ ಪ್ರದೇಶದ ಇಂಜಿನಿಯರ್ ಮಯಾಂಕ್ ಕಟಾರಿಯಾ, ಹಾಗೂ 2025 ಮಾರ್ಚ್ ನಲ್ಲಿ ವಿನೀತ್ ದುಬೆ ಕೂದಲು ಕಸಿ ಮಾಡಿಸಿಕೊಂಡು ಪ್ರಾಣಬಿಟ್ಟಿದ್ದಾರೆ.ವೈದ್ಯರ ಯಡವಟ್ಟಿನಿಂದಲೇ ಘಟನೆ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಕುಟುಂಬ ಸದಸ್ಯರು ನ್ಯಾಯಕ್ಕೆ ಅಂಗಲಾಚಿದ್ದಾರೆ. ಎರಡೂ ಪ್ರಕಾರಣವನ್ನು ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






