
ಖಾಸಗಿ ಆರೋಗ್ಯ ಸೇವೆ ಮತ್ತು ವೈದ್ಯಕೀಯ ಶಿಕ್ಷಣದ ಕ್ಷೇತ್ರದ ಮುಂಚೂಣಿಯ ತುಂಬೆ ಗ್ರೂಪ್ ಭವಿಷ್ಯದ ತಮ್ಮ ಎಲ್ಲ ಸಂಸ್ಥೆಗಳ ಉದ್ಯೋಗಗಳಲ್ಲಿ ಶೇ.3 ರಷ್ಟು “ಜಿಎಂಯು’ (ಗಲ್ಫ್ ಮೆಡಿಕಲ್ ಯೂನಿವರ್ಸಿಟಿ) ವಿದ್ಯಾರ್ಥಿಗಳಿಗೆ ಮೀಸಲಾಗಿರುತ್ತದೆ ಎಂದು ಪ್ರಕಟಿಸಿದೆ.
ಯುಎಇಯಲ್ಲಿ ಜರಗಿದ ಜಿಎಂಯು ಉದ್ಯೋಗ ಮೇಳ ಹಾಗೂ ಕೈಗಾರಿಕಾ ಸಹಭಾಗಿಗಳ ಸಭೆಯಲ್ಲಿ 90ಕ್ಕೂ ಹೆಚ್ಚು ಪ್ರಮುಖ ಆರೋಗ್ಯ ಸಂಸ್ಥೆಗಳು ಮತ್ತು ಕೈಗಾರಿಕಾ ಸಹಭಾಗಿಗಳು ಪಾಲ್ಗೊಂಡ ಸಭೆಯಲ್ಲಿ ಈ ಘೋಷಣೆ ಮಾಡಲಾಯಿತು.
ಜಿಎಂಯು ತಾತ್ಕಾಲಿಕ ಚಾನ್ಸೆಲರ್ ಪ್ರೊ|ಮಂಡ ವೆಂಕಟ್ರಮಣ ಮಾತನಾಡಿ, “ತುಂಬೆ ಗ್ರೂಪ್‌ನ ನಾಯಕತ್ವದ ಮತ್ತು ವಿಶೇಷವಾಗಿ ನಮ್ಮ ಸಂಸ್ಥಾಪಕ ಅಧ್ಯಕ್ಷ ಡಾ|ತುಂಬೆ ಮೊದೀನ್ ಅವರ ದೃಷ್ಟಿಕೋನ ಮಾದರಿಯಾದುದು. ಅವರ ನಾಯಕತ್ವದಲ್ಲಿ ತುಂಬೆ ಗ್ರೂಪ್ ಶಿಕ್ಷಣ, ಆರೋಗ್ಯ ಸೇವೆ ಮತ್ತು ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಜಿಎಂಯು ಹೊಂದಿದವರಿಗೆ ಶೇ.3ರಷ್ಟು ಉದ್ಯೋಗ ಮೀಸಲು ಒಳ್ಳೆಯ ಸಂಕಲ್ಪ’ ಎಂದರು.
ವೈದ್ಯಕೀಯ, ದಂತಚಿಕಿತ್ಸೆ, ಫಾರ್ಮಸಿ, ನರ್ಸಿಂಗ್, ಆರೋಗ್ಯ ವಿಜ್ಞಾನಗಳ ಕ್ಷೇತ್ರಗಳಲ್ಲಿ ಜಿಎಂಯು ಯುಎಇಗೆ ಅತ್ಯುನ್ನತ ಮಟ್ಟದ ತಜ್ಞರನ್ನು ನೀಡುತ್ತಿದೆ. 106ಕ್ಕೂ ಹೆಚ್ಚು ದೇಶಗಳಿಂದ ವಿದ್ಯಾರ್ಥಿಗಳು ಸೇರಿ, ಜಿಎಂಯು ಜಾಗತಿಕ ಮಾನ್ಯತೆ ಪಡೆದ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆ ಕೇಂದ್ರವಾಗಿದೆ ಎಂದರು.
ಉದ್ಯೋಗ ಮೇಳದಲ್ಲಿ ಎಐ ಆಧಾರಿತ ಕೌನ್ಸಿಲಿಂಗ್ ಉಪಕರಣಗಳು, ತತ್‌ಕ್ಷಣದ ಸಂದರ್ಶನಗಳು ಮತ್ತು ನೇಮಕಾತಿದಾರರೊಂದಿಗೆ ಸಂವಾದ ನಡೆಯಿತು.
ವಿಶನರಿ ಉದ್ಯಮಿ ಡಾ|ತುಂಬೆ ಮೊದೀನ್ ಸ್ಥಾಪಿಸಿದ ತುಂಬೆ ಗ್ರೂಪ್ ಎಂಬುದು ಖಾಸಗಿ ಅಕಾಡೆಮಿಕ್ ಆಸ್ಪತ್ರೆಗಳ ಅತಿದೊಡ್ಡ ಸಂಸ್ಥೆ. ಇದರಲ್ಲಿ ತುಂಬೆ ಯೂನಿವರ್ಸಿಟಿ ಆಸ್ಪತ್ರೆ, ತುಂಬೆ ಡೆಂಟಲ್ ಆಸ್ಪತ್ರೆ, ತುಂಬೆ ಫಿಸಿಕಲ್ ಥೆರಪಿ ಮತ್ತು ರಿಹ್ಯಾಬಿಲಿಟೇಶನ್ ಆಸ್ಪತ್ರೆ ಸೇರಿವೆ. ಇತ್ತೀಚೆಗೆ ಅವರು ಪಶುವೈದ್ಯಕೀಯ, ಮಾನಸಿಕ ಆರೋಗ್ಯ ಮತ್ತು ವೆಲ್‌ನೆಸ್ ಕೇಂದ್ರಗಳನ್ನು ಘೋಷಿಸಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಶ್ರೇಷ್ಠತೆಯೊಂದಿಗೆ ಈ ಗುಂಪು ಆರೋಗ್ಯ ಸೇವೆ, ಶಿಕ್ಷಣ ಮತ್ತು ಸಮುದಾಯ ಸೇವೆಯಲ್ಲಿ ಮುಂಚೂಣಿಯಲ್ಲಿದೆ.
ಇಲ್ಲಿ 2025ರ ಶೈಕ್ಷಣಿಕ ವರ್ಷದ ಪ್ರವೇಶwww.gmu.ac.ae ಭೇಟಿ ನೀಡಬಹುದು ಎಂದು ಪ್ರಕಟನೆ ತಿಳಿಸಿದೆ






