
ಜೊಮ್ಯಾಟೋ ಡೆಲಿವರಿ ರೈಡರ್‌ನೊಬ್ಬನ ಸ್ಫೂರ್ತಿದಾಯಕ ಕಥೆಯಯನ್ನು ಗ್ರಾಹಕರೊಬ್ಬರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ರೈಡರ್ ಒಮ್ಮೆ ಶಾಪೂರ್ಜಿ ಪಲ್ಲೊಂಜಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ 1.25 ರೂ ಲಕ್ಷ ಗಳಿಸುತ್ತಿದ್ದರು.
ಸಬ್‌ವೇನಿಂದ ಆರ್ಡರ್ ಮಾಡಿದ ವಸ್ತುಗಳನ್ನು ತಂದ ಬಳಿಕ ಅದರಲ್ಲಿ ಕೆಲ ವಸ್ತುಗಳು ಇಲ್ಲದಿದ್ದ ಕಾರಣ ಗ್ರಾಹಕ ಡೆಲಿವರಿ ಮಾಡಲು ಬಂದವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಆತ ರೆಸ್ಟೋರೆಂಟ್‌ಗೆ ಕರೆ ಮಾಡಿ ವಿಚಾರಿಸಲು ತಿಳಿಸಿದ್ದು, ಅದರಂತೆ ಗ್ರಾಹಕ ಕರೆ ಮಾಡಿದಾಗ ರೆಸ್ಟೋರೆಂಟ್‌ನವರದ್ದೇ ತಪ್ಪು ಎಂಬುದು ತಿಳಿದುಬಂದಿದೆ.
ಅಲ್ಲದೇ ರೆಸ್ಟೋರೆಂಟ್‌ನವರು ಡೆಲಿವರಿ ರೈಡರ್‌ನನ್ನು ವಾಪಸ್ ಬರುವಂತೆ ಮನವಿ ಮಾಡಿಕೊಳ್ಳಿ, ಆತನಿಗೆ 20 ರೂ ಕೊಡುತ್ತೇವೆ ಎಂದು ಹೇಳಿದ್ದಾರೆ. ಇದನ್ನು ಡೆಲಿವರಿ ಮಾಡಲು ಬಂದವರಿಗೆ ತಿಳಿಸಿದ ಗ್ರಾಹಕನಿಗೆ ಅಚ್ಚರಿಯ ಉತ್ತರ ಕಾದಿತ್ತು. ಏಕೆಂದರೆ ಆತ ಗ್ರಾಹಕರು ನಮ್ಮನ್ನು ನಂಬಿರುತ್ತಾರೆ, ಅವರಿಗೆ ಮಾಡಬೇಕಾದ ಕರ್ತವ್ಯವನ್ನು ನಿಭಾಯಿಸುವುದು ನನ್ನ ಜವಾಬ್ದಾರಿ, ನಾನು ವಾಪಸ್ ಹೋಗಿ ಉಳಿದ ವಸ್ತುಗಳನ್ನು ತರುತ್ತೇನೆ ಎಂದು ವಾಪಸ್ ತಂದಿದ್ದಾರೆ.
ಅಲ್ಲದೇ ರೆಸ್ಟೋರೆಂಟ್‌ನ 20 ರೂಗಳನ್ನು ಸಹ ನಿರಾಕರಿಸಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ತನಗೆ ಎಲ್ಲವೂ ಇದೆ ಮಾಡುವ ಕರ್ತವ್ಯಕ್ಕೆ ಹಾಗೂ ಬೇರೆಯವರು ಮಾಡುವ ತಪ್ಪಿಗೆ ನಾನೇಕೆ ಹಣ ಪಡೆದುಕೊಳ್ಳಲಿ ಎಂದು ಹೇಳಿದ್ದಾರೆ. ಬಳಿಕ ಅವರು ಈ ಹಿಂದೆ 1.25 ಲಕ್ಷ ರೂ ಸಂಪಾದನೆ ಮಾಡುತ್ತಿದ್ದ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿದ್ದು, ಅಪಘಾತವಾದ ಬಳಿಕ ಎಡಗಾಲು ಹಾಗೂ ಎಡಗೈಗೆ ಪಾರ್ಶ್ವವಾಯು ಪರಿಣಾಮ ಅಂಗವಿಕಲತೆಗೆ ಒಳಗಾಗಿದ್ದಾರೆ.
ಆದರೂ ಛಲ ಬಿಡದ ಅವರು ಡೆಲಿವರಿ ರೈಡರ್ ಆಗಿ ಸಂಪಾದಿಸಿ ಸ್ವಾಭಿಮಾನಿಯಾಗಿ ಜೀವಿಸುತ್ತಿದ್ದಾರೆ. ಇವರ ಕಥೆ ಕೇಳಿ ಭಾವುಕರಾದ ಬಳಕೆದಾರರು ಫೋಟಿ ಹಂಚಿಕೊಂಡು ನಡೆದ ಅಷ್ಟೂ ಘಟನೆಯನ್ನು ವಿವರಿಸಿದ್ದಾರೆ.






