
ರಾ.ಹೆ.75ರ ಬಿ.ಸಿ.ರೋಡು- ಕೈಕಂಬ ಮಧ್ಯೆ ಕಾರೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಚಾಲಕ ಮೃತಪಟ್ಟ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.
ಕೊಳ್ನಾಡು ನೂಜಿಬೈಲು ಭಂಡಾರದಮನೆ ನಿವಾಸಿ ಜಯರಾಮ್ (50) ಮೃತಪಟ್ಟ ವ್ಯಕ್ತಿ.
ಜಯರಾಮ್ ಅವರು ತುಂಬೆ ಆಸ್ಪತ್ರೆಯ ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಿದ್ದು, ಮುಂಜಾನೆ 4.30ರ ಸುಮಾರಿಗೆ ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ.
ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






