
ಕುದ್ಮಾರು -ಅಲಂಕಾರು ರಸ್ತೆಯ ಶಾಂತಿಮೊಗರಿನಲ್ಲಿ ಕಾರು ಮತ್ತು ಮಿನಿ ಟೆಂಪೋ ಢಿಕ್ಕಿ ಹೊಡೆದ ನಡೆದ ಘಟನೆ ಮೇ 28ರಂದು ಸಂಭವಿಸಿದೆ.
ಕುದ್ಮಾರು ಕಡೆಗೆ ಬರುತ್ತಿದ್ದ ಕಾರು ಮತ್ತು ಅಲಂಕಾರು ಕಡೆಗೆ ಹೋಗುತ್ತಿದ್ದ ಬೇಕರಿ ಉತ್ಪನ್ನಗಳ ಲೈನ್ ಸೇಲ್‌ನ ಮಿನಿ ಟೆಂಪೋ ನಡುವೆ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಟೆಂಪೋ ಪಲ್ಟಿಯಾಗಿದ್ದು, ಅದರಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.






