ಅಪರಾಧಗಳ ತಡೆಗಟ್ಟಲು ಮೋಟಾರು ವಾಹನ ಕಾಯ್ದೆಯಡಿ ಕಾರುಗಳಿಗೆ ಟಿಂಟ್‌ ಗ್ಲಾಸ್‌ ಅಳವಡಿಸಬಾರದೆಂಬ ನಿಯಮವಿದ್ದರೂ ಸಂಚಾರ ನಿಯಮ ಉಲ್ಲಂಘಿಸಿ ವಾಹನಗಳಲ್ಲಿ ಅಳವಡಿಸಿದವರ ವಿರುದ್ಧ ಸಂಚಾರಿ ಹಾಗೂ ಕಾನೂನು ಸುವ್ಯವಸ್ಥೆ ಪೊಲೀಸರು ವಿಶೇಷ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.

ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಜೂ.2 (ಸೋಮವಾರ), ಜೂ.3 (ಮಂಗಳವಾರ)ರಂದು ಕಾರುಗಳಲ್ಲಿ ಟಿಂಟೆಡ್ ಗ್ಲಾಸ್‌ಗಳ ಅಳವಡಿಸಿ ಸಂಚರಿಸುತ್ತಿದ್ದ ವಾಹನ ಮಾಲಕರ/ಚಾಲಕರ ಮೇಲೆ ಪ್ರಕರಣ ದಾಖಲಿಸಿದೆ. ಎರಡು ದಿನಗಳಲ್ಲಿ ಒಟ್ಟು 223 ಪ್ರಕರಣ ದಾಖಲಿಸಿ ರೂ. 1,11,500 ದಂಡವನ್ನು ವಸೂಲಿ ಮಾಡಿದೆ. ಅಲ್ಲದೇ 223 ಕಾರುಗಳಿಗೆ ಅಳವಡಿಸಿರುವ ಟಿಂಟೆಡ್ ಗ್ಲಾಸ್ ಹಾಗೂ ಬ್ಲಾಕ್ ಫಿಲ್ಮಂ ಸ್ಟಿಕರ್‌ಗಳನ್ನು ವಾಹನ ಚಾಲಕರಿಂದ ತೆಗೆಸಿ ಸೂಕ್ತ ಕ್ರಮ ಕೈಗೊಂಡು ತಿಳಿವಳಿಕೆಯ ನೀಡಲಾಗಿದೆ.

ಅಂಗಡಿಗಳ ಮಾಲಕರ ಸಭೆ ಆಯೋಜನೆ:
ಟಿಂಟೆಡ್ ಗ್ಲಾಸ್‌ ಅಳವಡಿಕೆ ಸಂಬಂಧಿಸಿ ಜೂ. 3 ರಂದು ಪೊಲೀಸ್ ಆಯುಕ್ತಕರ ಕಚೇರಿ ಸಭಾಂಗಣದಲ್ಲಿ ಮಂಗಳೂರು ನಗರ ಕಮಿಷನರೇಟ್ ಹಾಗೂ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯ ಕಾರ್ಯನಿರ್ವಹಿಸುವ ಕಾರು ಶೋ ರೂಮ್, ಆಕ್ಸೆಸರಿಸ್ ಅಂಗಡಿ, ಗ್ಯಾರೇಜ್‌, ಸ್ಟಿಕರ್ ಅಂಗಡಿಗಳ ಮಾಲಕರಿಗಾಗಿ ಆಯೋಜಿಸಿದ್ದ ಸಭೆಯಲ್ಲಿ ಸುಪ್ರೀಂಕೋರ್ಟ್‌ ಆದೇಶದ ಬಗ್ಗೆ ಮನವರಿಕೆ ಮಾಡಿ ಗ್ರಾಹಕರು ವಾಹನಗಳ ಗಾಜುಗಳಿಗೆ ಹೆಚ್ಚುವರಿ ಟಿಂಟ್‌ಗಳ ಅಳವಡಿಸದಂತೆ ಸೂಕ್ತ ಸೂಚನೆಗಳದಂತೆ ಸೂಚಿಸಿ ಎಂದು ಸಲಹೆ ನೀಡಿದ್ದಾರೆ. ವಾಹನಗಳ ಮೇಲಿನ ವಿಶೇಷ ಕಾರ್ಯಾ ಚರಣೆ ಮುಂದಿನ ದಿನಗಳಲ್ಲಿ ಮುಂದುವರಿಯಲಿದೆ ಪೊಲೀಸ್‌ ಇಲಾಖೆ ತಿಳಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!