ಮಂಗಳೂರು: ಮುಸ್ಲಿಮರ ಪವಿತ್ರ ಹಬ್ಬದಲ್ಲಿ ಒಂದಾದ ಈದ್ – ಉಲ್ – ಅಧಾ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆ ಸೇರಿ ರಾಜ್ಯಾದ್ಯಂತ ವಿವಿಧ ಮಸೀದಿಗಳಲ್ಲಿ ಶನಿವಾರ ಪ್ರಾರ್ಥನೆ ನೆರವೇರಿತು. ಬೆಳಗ್ಗಿನಿಂದಲೇ ಮುಸ್ಲಿಂ ಬಾಂಧವರು ತಮ್ಮ ಸನಿಹದ ಮಸೀದಿಗಳಿಗೆ ತೆರಳಿ ಪ್ರಾರ್ಥನೆ ನೆರವೇರಿಸಿದರು. ಬಳಿಕ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಪುತ್ತೂರು ಕೇಂದ್ರ ಜುಮಾ ಮಸ್ಜಿದ್ ಮುಕ್ವೆ ಜುಮಾ ಮಸ್ಜಿದ್ ಸೇರಿದಂತೆ ಪುತ್ತೂರು ತಾಲೂಕಿನ ಎಲ್ಲಾ ಮಸ್ಜಿದ್‌ನಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಪ್ರಾರ್ಥನೆ ನೆರವೇರಿತು. ನೂರಾರು ಮಂದಿ ಮುಸ್ಲಿಂ ಬಾಂಧವರು ಸೇರಿ ಪವಿತ್ರ ಹಬ್ಬದ ಪ್ರಾರ್ಥನೆ ನೆರವೇರಿಸಿದರು.














