ಗುಜರಾತ್‌ನ ಅಹಮದಾಬಾದ್‌ನ ಮೇಘನಿ ನಗರ ಪ್ರದೇಶದಲ್ಲಿಇಂದು ಮಧ್ಯಾಹ್ನ ವಿಮಾನ ದುರಂತ ನಡೆದಿದ್ದು, 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನವಾಗಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪತನಗೊಂಡ ಏರ್ ಇಂಡಿಯಾದ ಸಂಸ್ಥೆಯ AI-171 ಪ್ರಯಾಣಿಕ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ದುರಂತಕ್ಕೂ ಮುನ್ನ ಫೇಸ್‌ಬುಕ್‌ನಲ್ಲಿ ಲೈವ್ ಬಂದಿದ್ದಾರೆ. ದುರಂತ ಸಂಭವಿಸುವ ಕೆಲವೇ ಕ್ಷಣಗಳ ಮೊದಲು ಫೇಸ್‌ಬುಕ್ ಲೈವ್ ವಿಡಿಯೋ ಆರಂಭಿಸಿದ್ದು, ದುರಂತದ ದೃಶ್ಯಗಳು ಈ ವಿಡಿಯೋದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ಪ್ರಯಾಣಿಕರು ಕಿರುಚಾಡುವುದು ಕೂಡ ಕೇಳಿಸುತ್ತಿದ್ದು, ನೋಡುಗರ ಮನಕಲುಕುವಂತಿದೆ.














