ಬೆಂಗಳೂರಿನಲ್ಲಿ (Bengaluru) ಸ್ಪಾ ಪಾರ್ಲರ್‌ (Spa) ಹೆಸರಿನಲ್ಲಿ ವೇಶ್ಯಾ ವಾಟಿಕೆ ದಂಧೆ ನಡೆಸುವವರ ಮೇಲೆ ಅನೇಕ ಬಾರಿ ದಾಳಿ ಆಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಅನೇಕರನ್ನ ಸಹ ಬಂಧಿಸಲಾಗಿದೆ. ಇದೀಗ ಮತ್ತೆ ಸಿಸಿಬಿ (CCB) ಪೊಲೀಸರು ಸ್ಪಾಗಳ ಮೇಲೆ ದಾಳಿ ಮಾಡಿದೆ.

ಬಾಂಗ್ಲಾದೇಶದ ಯುವತಿ ಪತ್ತೆ
ರಿಚ್ಮಡ್‌ ಟೌನ್‌ನಲ್ಲಿರುವ ಪಿಕ್ಸೀಸ್‌ ಸ್ಫಾ ಮೇಲೆ ವೇಶ್ಯಾ ವಾಟಿಕೆ ನಡೆಸುತ್ತಿರುವ ಬಗ್ಗೆ ಅನುಮಾನ ಬಂದು ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಈ ಸಮಯದಲ್ಲಿ ಬಾಂಗ್ಲಾ ದೇಶದ ಯುವತಿ ಪತ್ತೆಯಾಗಿದ್ದಾರೆ. ಬಾಂಗ್ಲಾದ ಜಯಶೋರ್‌ ಜಿಲ್ಲೆಯ ಕುಲ್ನಾ ಪ್ರದೇಶದ ಯುವತಿಯನ್ನ ಪೊಲೀಸರು ರಕ್ಷಿಸಲಾಗಿದೆ.

ಪ್ರಕರಣ ದಾಖಲು

ಇದೀಗ ಸಿಸಿಬಿ ಪೊಲೀಸರು ಈ ಸ್ಪಾ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, ಯಾರೆಲ್ಲಾ ಶಾಮೀಲಾಗಿದ್ದಾರೆ ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ಸ್ಪಾ ಹೆಸರಿನಲ್ಲಿ ಅನೇಕ ಜನರು ಈ ರೀತಿ ಕೆಲಸಗಳನ್ನ ಮಾಡುತ್ತಿದ್ದು, ಬಹಳಷ್ಟು ಬಾರಿ ದಾಳಿ ನಡೆಸಿ ಅನೇಕ ಯುವತಿಯರನ್ನ ರಕ್ಷಣೆ ಮಾಡಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!