ಹೋಟೆಲ್‌ ರೂಂ ಒಂದರಲ್ಲಿ ಜೋಡಿಯೊಂದು ಕಿಟಕಿಯ ಪರದೆ ಹಾಕದೇ ಮೈಮರೆತು ಖಾಸಗಿ ಕ್ಷಣಗಳನ್ನು ಅನುಭವಿಸಿ ಪೇಚಿಗೆ ಸಿಲುಕಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

ದಂಪತಿಯ ಫ್ರೀ ಶೋ ನೋಡುತ್ತಾ ನಿಂತ ಜನರಿಂದ ಸ್ಥಳದಲ್ಲಿ ಟ್ರಾಫಿಕ್‌ ಜಾಮ್‌ ಕೂಡಾ ಆಗಿದೆ.

ಇದರ ವಿಡಿಯೋವನ್ನು ದಾರಿಹೋಕರು ತಮ್ಮ ಮೊಬೈಲ್‌ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ವಿಡಿಯೋ ವೈರಲ್‌ ಆಗುತ್ತಿದೆ.

ವರದಿಗಳ ಪ್ರಕಾರ ಜೈಪುರದ 22 ಗೋಡೌನ್ ಬಳಿಯ ಪಂಚತಾರಾ ಹಾಲಿಡೇ ಇನ್ ಹೋಟೆಲ್‌ನಲ್ಲಿ ನಡೆದ ಘಟನೆ ಇದಾಗಿದೆ. ಹೋಟೆಲ್ ಕೋಣೆಯೊಳಗೆ ದಂಪತಿ ಕಿಟಕಿಯ ಪರದೆ ಹಾಕದೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾರೆ. ಅದೇ ಹೋಟೆಲ್‌ನ ಪಕ್ಕದ ಹೆದ್ದಾರಿಯಲ್ಲಿ ಓಡಾಡುತ್ತಿದ್ದ ಜನರಿಗೆ ದಂಪತಿಯ ಖಾಸಗಿ ಕ್ಷಣ ಕಣ್ಣಿಗೆ ಬಿದ್ದಿದೆ. ಸ್ಥಳೀಯರಿಗೆ ಇದು ಮುಜುಗರವನ್ನೂ ಉಂಟುಮಾಡಿದೆ.

ತಡ ಮಾಡದೆ ಜನರು ತಮ್ಮ ಮೊಬೈಲ್‌ ಕ್ಯಾಮೆರಾಗಳನ್ನು ತೆಗೆದು ಎಲ್ಲವನ್ನೂ ರೆಕಾರ್ಡ್‌ ಮಾಡಲು ಪ್ರಾರಂಭಿಸಿದ್ದಾರೆ. ಅದೇ ವೇಳೆ ಹಲವರು ದಂಪತಿಯನ್ನು ನಿಂದಿಸುವುದು ಹಾಗೂ ಪರದೆ ಹಾಕುವಂತೆ ಕೂಗಾಡಿರುವುದು ಕೇಳಿ ಬಂದಿದೆ. ಆದರೆ ದಂಪತಿ ಇದಾವುದರ ಪರಿವೇ ಇಲ್ಲದೆ ಖಾಸಗಿ ಕ್ಷಣದಲ್ಲಿ ತಲ್ಲೀನರಾಗಿದ್ದಾರೆ.

ಸದ್ಯ ದಂಪತಿಯ ಗುರುತು ಎಲ್ಲೂ ಬಹಿರಂಗವಾಗಿಲ್ಲ. ಘಟನೆ ಬಗ್ಗೆ ಪೊಲೀಸರು ಕೂಡಾ ಯಾವುದೇ ದೂರು ದಾಖಲಿಸಿಲ್ಲ ಎನ್ನಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!