ಸಾ ರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳಲು ಇಚ್ಚಿಸದ ಎಂಎಸ್ ಧೋನಿ ಇತ್ತೀಚೆಗೆ ತಮ್ಮ ಹಳೆಯ ಸ್ನೇಹಿತನ ಮಗಳ ಹುಟ್ಟುಹಬ್ಬದ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.ಈ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ಎಂ.ಎಸ್ ಧೋನಿ ಅವರ ಸರಳತೆಗೆ ನೆಟ್ಟಿಗರು ಮನಸೋತಿದ್ದಾರೆ.

ಹೀಗೆ ಎಂ.ಎಸ್ ಧೋನಿ ತಮ್ಮ ಸ್ನೇಹಿತನ ಮಗಳ ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗಿಯಾಗಿರುವುದು ಇದೇ ಮೊದಲಲ್ಲ,ಕಳೆದ ವರ್ಷ ಕೂಡ ಅದೇ ಬಾಲಕಿಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದರು.ಅವರ ಈ ನಡತೆ ತಮ್ಮ ಆಪ್ತರಿಗೆ ಧೋನಿ ಎಷ್ಟು ಪ್ರಾಮುಖ್ಯತೆ ನೀಡುತ್ತಾರೆ ಎಂಬುದನ್ನು ತೋರಿಸುತ್ತದೆ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

2025ರ ಐಪಿಎಲ್ ಸರಣಿಯಲ್ಲೂ ಧೋನಿ ಕೊನೆಯ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ರುತುರಾಜ್ ಗಾಯಕ್ವಾಡ್ ಅನುಪಸ್ಥಿತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದರು. 14 ಪಂದ್ಯಗಳಲ್ಲಿ 196 ರನ್ ಗಳಿಸಿ ಈ ಸೀಸನ್ ಗೆ ಗುಡ್ ಬೈ ಹೇಳಿದ್ದಾರೆ.ಸದ್ಯ ಮುಂದಿನ ಐಪಿಎಲ್ ಸೀಸನ್ ಧೋನಿ ಆಡಬೇಕು ಎಂಬುದು ಅಭಿಮಾನಿಗಳ ಬಯಕೆಯಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!