ಬಾ ಲಿವುಡ್‌ನ ಖ್ಯಾತ ನಟಿ ಕರಿಷ್ಮಾ ಕಪೂರ್‌ (karisma kapoor) ಅವರ ಪತಿ ಸಂಜಯ್‌ ಕಪೂರ್‌ ಜೂನ್‌ 12ರಂದು ಹೃದಯಾಘಾತದಿಂದ ನಿಧನರಾದರು. ಕರಿಷ್ಮಾ ಕಪೂರ್‌ ಮತ್ತು ಸಂಜಯ್‌ ಕಪೂರ್‌ 2003ರಲ್ಲಿ ವಿವಾಹ ಆಗಿದ್ದರು. ಇಬ್ಬರು ಮಕ್ಕಳು ಇದ್ದಾರೆ. 2016ರಲ್ಲಿ ವಿಚ್ಛೇದನ ಪಡೆದರು.

ಡಿವೋರ್ಸ್‌ ಬಳಿಕ ಸಂಜಯ್‌ ಕಪೂರ್‌ ಇನ್ನೊಂದು ಮದುವೆಯಾದರೆ, ಕರಿಷ್ಮಾ ತಮ್ಮ ಮಕ್ಕಳನ್ನ ಬೆಳೆಸುವತ್ತ ಸಂಪೂರ್ಣ ಗಮನ ಕೊಟ್ಟರು. ಇನ್ಯಾರನ್ನೂ ಅವರು ವಿವಾಹ ಆಗ್ಲಿಲ್ಲ.

ಸಂಜಯ್‌ ಕಪೂರ್‌ರಿಂದ ದೂರವಾಗಿ 9ವರ್ಷಗಳೇ ಕಳೆದವು. ಹಾಗಿದ್ದಾಗ್ಯೂ ಮಾಜಿ ಪತಿ ನಿಧನರಾದಾಗ ಅವರ ಅಂತಿಮ ದರ್ಶನಕ್ಕೆಂದು ಮಕ್ಕಳನ್ನ ಕರೆದುಕೊಂಡು ದೆಹಲಿಗೆ ಹೋದರು. ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡರು. ತಮ್ಮ ಮಾಜಿ ಪತಿಯ ನಿಧನ ಕರಿಷ್ಮಾರಿಗೂ ಶಾಕ್‌ ತಂದಿದ್ದು ಸಹಜ. ಆರೋಗ್ಯವಾಗಿಯೇ ಇದ್ದ ಸಂಜಯ್‌ ಕಪೂರ್‌ ತಮ್ಮ 53ನೇ ವಯಸ್ಸಲ್ಲಿ ನಿಧನರಾಗಿದ್ದು ಅವರ ಆಪ್ತವಲಯದವರಿಗೆಲ್ಲರಿಗೂ ನೋವು ತಂದಿದೆ.


ಸೋಷಿಯಲ್‌ ಮೀಡಿಯಾ ಪೋಸ್ಟ್‌

ಕರಿಷ್ಮಾ ಕಪೂರ್‌ ಅವರು ತಮ್ಮ ಮಕ್ಕಳಾದ ಸಮೈರಾ (19) ಮತ್ತು ಕಿಯಾನ್ (13) ಜೊತೆ ದೆಹಲಿಗೆ ಹೋಗಿ ಸಂಜಯ್‌ ಕಪೂರ್‌ ಅವರ ಶ್ರದ್ಧಾಂಜಲಿ ಸಭೆ ಮತ್ತು ಅಂತ್ಯಸಂಸ್ಕಾರ ಎರಡರಲ್ಲೂ ಪಾಲ್ಗೊಂಡರು. ಸಂಜಯ್‌ ಕುಟುಂಬದವರಿಗೂ ಸಾಂತ್ವನ ಹೇಳಿದರು. ಅದೆಲ್ಲ ಆದ್ಮೇಲೆ ಈಗ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಒಂದು ಪೋಸ್ಟ್‌ ಹಾಕಿದ್ದಾರೆ. ʼನಿಮ್ಮೆಲ್ಲರ ಹಾರೈಕೆ ಮತ್ತು ಬೆಂಬಲಕ್ಕೆ ಧನ್ಯವಾದಗಳುʼ ಎಂದು ಬರೆದು ಕೈಮುಗಿದ ಮತ್ತು ರೆಡ್‌ ಹಾರ್ಟ್‌ ಸಿಂಬಲ್‌ ಎಮೋಜಿ ಹಾಕಿದ್ದಾರೆ. ಅಂದರೆ ಸಂಜಯ್‌ ಕಪೂರ್‌ ನಿಧನದ ದುಃಖದ ಸಮಯದಲ್ಲಿ ಬೆಂಬಲಕ್ಕೆ ನಿಂತವರಿಗೆ, ಸಾಂತ್ವನ ಹೇಳಿದವರಿಗೆಲ್ಲ ಕರಿಷ್ಮಾ ಕೃತಜ್ಞತೆ ಸಲ್ಲಿಸಿದ್ದಾರೆ. ಸಂಜಯ್‌ ಸಾವಿನ ಬಳಿಕ ಇದು ಅವರ ಮೊದಲ ಸೋಷಿಯಲ್‌ ಮೀಡಿಯಾ ಪೋಸ್ಟ್‌ ಆಗಿದೆ..

ಕರಿಷ್ಮಾ ಮತ್ತು ಸಂಜಯ್‌ ಕಪೂರ್‌ ಮಧ್ಯೆ ಭಿನ್ನಾಭಿಪ್ರಾಯ ಹೆಚ್ಚಾಗಿದ್ದರಿಂದಲೇ ಇಬ್ಬರೂ ಪ್ರತ್ಯೇಕರಾಗಲು ನಿರ್ಧರಿಸಿದ್ದರು. ಇನ್ನ ಸಂಜಯ್‌ ಅವರ ಅನೇಕ ವರ್ತನೆ ಕರಿಷ್ಮಾ ಕಪೂರ್‌ ತಂದೆಗೆ ಇಷ್ವಾಗುತ್ತಿರಲಿಲ್ಲ ಎಂದೂ ವರದಿಯಾಗಿದೆ. ಸಂಜಯ್‌ ತಮ್ಮ ಮಗಳನ್ನ ಸರಿಯಾಗಿ ನೋಡಿಕೊಳ್ಳೋದಿಲ್ಲ..ಅವನಿಗೆ ದುಡ್ಡಿನ ಮದ ಇದೆ. ಹಲವು ಹೆಣ್ಣುಮಕ್ಕಳ ಜೊತೆ ಸಂಬಂಧ ಹೊಂದಿದ್ದಾನೆ ಎಂಬಿತ್ಯಾದಿ ಆರೋಪಗಳನ್ನೂ ಅವರು ಮಾಡಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!