ವರ್ಗಾವಣೆ ಭಯದಲ್ಲಿ ಹಳ್ಳಿಹೊಳೆಯ ಸುಳುಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕುಬೇರ(49) ಎಂಬವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಮಲಶೀಲೆ ಪಾರೆ ಎಂಬಲ್ಲಿ ಜು.7ರಂದು ಬೆಳಗ್ಗೆ ನಡೆದಿದೆ.

ಇವರು ತನ್ನ ಪತ್ನಿ ಸುಮಿತಾ ಬಳಿ ಸರಕಾರಿ ಶಾಲೆಯ ನಿಯಮದ ಪ್ರಕಾರ ಒಂದು ಶಾಲೆಯಲ್ಲಿ 60 ವಿದ್ಯಾರ್ಥಿಗಳಿಗಿಂತ ಕಡಿಮೆ ವಿದ್ಯಾರ್ಥಿಗಳಿದ್ದಲ್ಲಿ ಆ ಶಾಲೆಯ ಮುಖ್ಯ ಶಿಕ್ಷಕರನ್ನು ವರ್ಗಾವಣೆಗೊಳಿಸುವು ದಾಗಿ ಹೇಳಿದ್ದರು.

ಕುಬೇರ ಕೆಲಸ ಮಾಡುವ ಶಾಲೆಯಲ್ಲಿ 53 ವಿದ್ಯಾರ್ಥಿಗಳಿರುವುದರಿಂದ ಕುಬೇರ ಕಳೆದ 1 ತಿಂಗಳಿನಿಂದ ತನಗೆ ಆ ಶಾಲೆಯಿಂದ ವರ್ಗಾವಣೆಯಾಗುವುದಾಗಿ ಭಾವಿಸಿ ಚಿಂತೆಗೆ ಒಳಗಾಗಿದ್ದರು ಎನ್ನಲಾಗಿದೆ.

ಜು.7ರಂದು ಅವರು ಶಾಲೆಗೆ ಹೋಗಿದ್ದು ಬೆಳಗ್ಗೆ ಅವರು ಕಮಲಶೀಲೆ ಪಾರೆ ಎಂಬಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ತಾನು ಕೆಲಸ ಮಾಡುವ ಶಾಲೆಯಿಂದ ಬೇರೆ ಕಡೆಗೆ ವರ್ಗಾವಣೆಯಾಗುವ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತರ ಪತ್ನಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!