ಪುತ್ತೂರು: ಬನ್ನೂರು ಅಲುಂಬುಡದ ತೋಟವೊಂದರಲ್ಲಿ ತೆಂಗಿನ ಕಾಯಿ ಕಳ್ಳನನ್ನು ಸ್ಥಳೀಯರು ರೆಡ್‌ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಜು.7ರ ರಾತ್ರಿ ನಡೆದಿದೆ

ಕಳೆದ ಕೆಲವು ವಾರಗಳಿಂದ ಬನ್ನೂರು ಪರಿಸರದ ತೋಟದಿಂದ ತೆಂಗಿನ ಕಾಯಿ, ಅಡಿಕೆ ಕಳವಾಗಿರುತ್ತಿರುವುದು ಬೆಳಕಿಗೆ ಬಂದಿತ್ತು.ಈ ನಿಟ್ಟಿನಲ್ಲಿ ಪ್ರತಿ ಮನೆಯವರು ರಾತ್ರಿ ತೋಟ ಕಾವಲು ಕಾಯುವ ಪರಿಸ್ಥಿತಿ ಬಂದೊದಗಿತ್ತು.ಜು.7ರ ರಾತ್ರಿ ಬನ್ನೂರು ಅಲುಂಬುಡ ರಾಜೇಶ್ ಎಂಬವರ ತೋಟದಲ್ಲಿ ತೆಂಗಿನ ಮರದಿಂದ ತೆಂಗಿನ ಕಾಯಿ ಬೀಳುತ್ತಿದ್ದ ಶಬ್ದ ಕೇಳಿ ರಾಜೇಶ್, ಸಹೋದರರು ತೆಂಗಿನ ಮರದ ಬಳಿ ಹೋದಾಗ ಸತೀಶ್ ಎಂಬವರು ತೆಂಗಿನ ಮರದ ಬುಡದಲ್ಲಿದ್ದರು. ಆತನನ್ನು ಹಿಡಿದಾಗ ಆತ ತಪ್ಪಿಸಿ ಓಡಿ ಹೋಗಿದ್ದು ತೆಂಗಿನ ಮರದಲ್ಲಿದ್ದ ಯಶನ್ ಎಂಬಾತನನ್ನು ತೆಂಗಿನ ಮರದಿಂದ ಕೆಳಗೆ ಇಳಿಸಿ ಹಿಡಿದು ಪೊಲೀಸರಿಗೆ ಒಪ್ಪಿಸಿರುವುದಾಗಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!