ಪುತ್ತೂರು: ಪುತ್ತೂರಿಗೆ ವಸತಿ ಮತ್ತು ಅಲ್ಪ ಸಂಖ್ಯಾತರ ಕಾಲನಿ ಅಭಿವೃದ್ದಿಗೆ ಅನುದಾನ ನೀಡುವಂತೆ ಆಗ್ರಹಿಸಿ ಶಾಸಕ ಅಶೋಕ್ ರೈ ಅವರು ವಸತಿ ಮತ್ತು ಹಜ್ ಖಾತೆ ಸಚಿವ ಝಮೀರ್ ಅಹಮದ್ ರವರಿಗೆ ಮನವಿ ಮಾಡಿದರು.
ಇಂದು ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾದ ಶಾಸಕರು ವಸತಿ ಮತ್ತು ಅನುದಾನ ಒದಗಿಸುವ ಬಗ್ಗೆ ಸಚಿವರ ಜೊತೆ ಚರ್ಚೆ ನಡೆಸಿದರು. ಪುತ್ತೂರಿನಲ್ಲಿ ಹಲವು ಕುಟುಂಬಗಳು ಮನೆಯಿಲ್ಲದೆ ಇದ್ದು ಅವರಿಗೆ ಮನೆ ನಿರ್ಮಾಣ ಮಾಡುವಲ್ಲಿ ನಿವೇಶನ ನೀಡುವ ಬಗ್ಗೆ ಈಗಾಗಲೇ ಜಾಗ ಗುರುತಿಸಲಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 300 ಎಕ್ರೆ ಜಾಗವನ್ನು ಕಾಯ್ದಿರಿಸಲಾಗಿದೆ. ಕ್ಷೇತ್ರಕ್ಕೆ ಮನೆ ಮಂಜೂರು ಮಾಡಿದಲ್ಲಿ ಅದನ್ನು ಅರ್ಹ ಬಡ ಕುಟುಂಬಗಳಿಗೆ ನೀಡಬೇಕಾಗಿದ್ದು ಸಹಕಾರ ನೀಡುವಂತೆ ಮನವಿ ಮಾಡಿದ ಶಾಸಕರು ಕನಿಷ್ಟ 500 ಮನೆಯನ್ನು ನೀಡುವಂತೆ ಮನವಿ ಮಾಡಿದರು.

ಅಲ್ಪ ಸಂಖ್ಯಾತ ಕಾಲನಿ ರಸ್ತೆಗೆ ಅನುದಾನ


ಅಲ್ಪ ಸಂಖ್ಯಾತ ಕಾಲನಿ ರಸ್ತೆ ಅಭಿವೃದ್ದಿಗೆ ಅನುದಾನ ನೀಡುವಂತೆ ಈ ಸಂದರ್ಭದಲ್ಲಿ ಶಾಸಕರು‌ಮನವಿ‌ ಮಾಡಿದರು.
ಈ ವೇಳೆ ಡಿಸಿಸಿ ಕಾರ್ಯದರ್ಶಿ ಮುರಳೀದರ್ ರೈ ಮಟಂತಬೆಟ್ಟು, ಎನ್ ಎಸ್ ಯು ಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಾಯಬ್ಬೆ , ಶಿವರಾಮ ಆಳ್ವ ಬಳ್ಳಮಜಲು, ಉದ್ಯಮಿ ಜಯಕುಮಾರ್, ನ್ಯಾಯವಾದಿ ದಿನೇಶ್ ಉಳೇಪಾಡಿ, ಪುತ್ತೂರು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ ,ನಗರಸಭೆ ನಾಮ ನಿರ್ದೇಶಿತ ಸದಸ್ಯ ಬಶೀರ್ ಪರ್ಲಡ್ಕ ಉಒಸ್ಥಿತರಿದ್ಧರು.

Leave a Reply

Your email address will not be published. Required fields are marked *

Join WhatsApp Group
error: Content is protected !!