ಬೆಂಗಳೂರು: ರಾಜ್ಯದ ಎಲ್ಲಾ ಮಲ್ಟಿಪ್ಲೆಕ್ಸ್ ಮತ್ತು ಚಿತ್ರಮಂದಿರಗಳಲ್ಲಿ ಇನ್ಮುಂದೆ ಟಿಕೆಟ್ ದರ ಏಕರೂಪವಾಗಿರಲಿದೆ. ಈ ಕುರಿತು ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ
ರಾಜ್ಯ ಸರ್ಕಾರದ ಹೊಸ ನಿಯಮದ ಪ್ರಕಾರ, ಯಾವುದೇ ಚಿತ್ರಮಂದಿರ ಅಥವಾ ಮಲ್ಟಿಪ್ಲೆಕ್ಸ್ ಟಿಕೆಟ್ ದರವನ್ನು ₹200 ಮೀರಿಸಲು ಅನುಮತಿ ಇಲ್ಲ. ಈ ನಿಯಮವು ಎಲ್ಲಾ ಭಾಷೆಗಳ ಸಿನಿಮಾಗಳಿಗೂ ಅನ್ವಯವಾಗಲಿದೆ ಎಂಬುದಾಗಿ ಸರ್ಕಾರ ಸ್ಪಷ್ಟಪಡಿಸಿದೆ.
ಈ ಆದೇಶದ ಅನ್ವಯ ರಾಜ್ಯದಾದ್ಯಂತ ಇರುವ ಎಲ್ಲಾ ಮಲ್ಟಿಪ್ಲೆಕ್ಸ್, ಚಿತ್ರಮಂದಿರಗಳು ಇದೇ ದರಕ್ಕೆ ಟಿಕೆಟ್ ನೀಡಬೇಕಾಗುತ್ತದೆ. ಚಿತ್ರಮಂದಿರಗಳ ವ್ಯಾಪ್ತಿಯಲ್ಲಿ ಪ್ರೇಕ್ಷಕರಿಗೆ ಇನ್ನು ಮುಂದೆ ಸರಾಸರಿ ದರದ ಟಿಕೆಟ್ ಲಭಿಸುವುದು ಖಚಿತವಾಗಿದೆ.
ಚಿತ್ರರಂಗದಲ್ಲಿ ಸಮಾನತೆ ಹಾಗೂ ಪ್ರೇಕ್ಷಕರ ಪಾಲಿಗೆ ಅನುಕೂಲತೆಯನ್ನು ಉದ್ದೇಶಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.














