
ಪುತ್ತೂರು:ಮಾಡತ್ತಾರು ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ ಆಶ್ರಯದಲ್ಲಿ ನಡೆಯುವ 13ನೇ ವರ್ಷದ ಮೊಸರು ಕುಡಿಕೆ ಉತ್ಸವ ಆಗಸ್ಟ್ 17 ರಂದು (ಆದಿತ್ಯವಾರ) ಶ್ರೀ ಪುಣ್ಯ ಕುಮಾರ ದೇವಸ್ಥಾನದ ನೆಲೆಯಲ್ಲಿ ಜರಗಲಿದೆ.
ಈ ಉತ್ಸವದ ಅಂಗವಾಗಿ ಇಂದು ಶ್ರೀ ಪುಣ್ಯ ಕುಮಾರ ದೈವದ ಚಾವಡಿಯಲ್ಲಿ ಉತ್ಸವದ ಅಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ ಶ್ರೀಧರ್ ಹೆಗ್ಡೆ ಉಳಿಯ, ಕಾರ್ಯದರ್ಶಿ ಉಮೇಶ್ ಆಚಾರ್ಯ ಕಲ್ಲೇಗ, ಮಾಜಿ ಕಾರ್ಯದರ್ಶಿ ನಾರಾಯಣ ಗೌಡ ಕಲ್ಲೇಗ, ಜನ್ಮಾಷ್ಟಮಿ ಸಮಿತಿಯ ಕಾರ್ಯದರ್ಶಿ ಪುರುಷೋತ್ತಮ ಗೌಡ ಪೋಳ್ಯ, ಯುವಕ ಮಂಡಲದ ಅಧ್ಯಕ್ಷ ಸುನೀಲ್ ಪಲ್ಲತ್ತಾರು ಹಾಗೂ ಶ್ರೀ ದುರ್ಗಾ ಪೂಜಾ ಸೇವಾ ಸಮಿತಿಯ ಅಧ್ಯಕ್ಷ ಕೇಶವ ಪೂಜಾರಿ ಕಲ್ಲೇಗ ಉಪಸ್ಥಿತರಿದ್ದರು.






