ಪುತ್ತೂರು: ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಆರೋಪಿಗಳ ಜಾಮೀನು ಅರ್ಜಿ ಎರಡನೇ ಬಾರಿಗೆ ವಜಾಗೊಳಿಸಿದೆ.
ಕಲ್ಲೇಗ ಟೈಗರ್ಸ್ ತಂಡದ ನಾಯಕ ಅಕ್ಷಯ್ ಕಲ್ಲೇಗನನ್ನು ಹತ್ಯೆ ಮಾಡಿದ ಆರೋಪದಲ್ಲಿ ಬಂಧಿತರಾದ ಚೇತನ್, ಮನೀಷ್, ಕೇಶವ ಹಾಗೂ ಮಂಜುನಾಥ್ ಎಂಬವರು ಹೈಕೋರ್ಟ್‌ಗೆ ಮತ್ತೊಮ್ಮೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿಯವರ ಏಕಸದಸ್ಯ ಪೀಠ, ಆರೋಪಿ ಪಕ್ಸದಿಂದ ಸಲ್ಲಿಸಲಾದ ಜಾಮೀನು ಅರ್ಜಿ ಖಂಡಿತವಾಗಿ ತಿರಸ್ಕರಿಸಿದೆ.
ಕೋರ್ಟ್ ತನ್ನ ಆದೇಶದಲ್ಲಿ, ನಾಲ್ಕು ತಿಂಗಳೊಳಗೆ ಟ್ರಯಲ್ ಕೋರ್ಟ್‌ನಲ್ಲಿ ಪ್ರಮುಖ ಸಾಕ್ಷಿಗಳ ವಿಚಾರಣೆಯನ್ನೂ ಪೂರ್ಣಗೊಳಿಸಲು ನಿರ್ದೇಶನ ನೀಡಿದೆ. ಈ ಅವಧಿಯವರೆಗೆ ಆರೋಪಿಗಳು ಮತ್ತೊಂದು ಜಾಮೀನು ಅರ್ಜಿ ಸಲ್ಲಿಸದಂತೆ ಸ್ಪಷ್ಟ ಸೂಚನೆ ನೀಡಲಾಗಿದೆ.
ಈ ಪ್ರಕರಣದಲ್ಲಿ ಅಕ್ಷಯ್ ಕಲ್ಲೇಗ ಪರದಿಂದ ವಿಶೇಷ ಅಭಿಯೋಜಕರಾಗಿ ಖ್ಯಾತ ನ್ಯಾಯವಾದಿ ರಾಜಶೇಖರ್ ಹಿಲ್ಯಾರ್ ಅವರು ಬಲಿಷ್ಠ ವಾದ ಮಂಡಿಸಿದ್ದಾರೆ.














