
ಪುತ್ತೂರು: ಬನ್ನೂರು ಗ್ರಾಮದ ಕನಡ್ಕ ನಿವಾಸಿ ಹಾಗೂ ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಿಬ್ಬಂದಿ ತೇಜಸ್ವಿನಿ (22) ಅವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಆ.17ರಂದು ನಡೆದಿದೆ.
ತೇಜಸ್ವಿನಿ ಅವರು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತರು ತಂದೆ ಡೊಂಬಯ್ಯ ಕುಲಾಲ್, ತಾಯಿ ಭವಾನಿ ಮತ್ತು ಸಹೋದರ ಸ್ವಸ್ತಿಕ್ ಅವರನ್ನು ಅಗಲಿದ್ದಾರೆ.






