ಪುತ್ತೂರು: ದರ್ಬೆ ಬುಶ್ರಾ, ಟವಸ್ ೯ನಲ್ಲಿ ಕಾರ್ಯಾಚರಿಸುತ್ತಿರುವ ಪುತ್ತೂರಿನ ಪ್ರತಿಷ್ಠಿತ ನಯಾ ಚಪ್ಪಲ್ ಬಜಾ‌ರ್ ಮಳಿಗೆಯು ದ್ವಿತೀಯ ಬಾರಿಗೆ ಸ್ವಾತಂತ್ರೋತ್ಸವದ ಅಂಗವಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸುವ ಕಾರ್ಯಕ್ರಮ ಆ.15 ರಂದು ನಯಾ ಚಪ್ಪಲ್ ಬಜಾರ್ ಮಳಿಗೆಯಲ್ಲಿ ನಡೆಯಿತು.

ಪ್ರಗತಿ ಪ್ಯಾರಾಮೆಡಿಕಲ್ ಇದರ ಪ್ರಾಂಶುಪಾಲೆ ಪ್ರೀತಾ ಹೆಗ್ಡೆ ಮಾತನಾಡಿ, ರಫೀಕ್ ಎಂ.ಜಿರವರು ವಿದ್ಯಾರ್ಥಿಗಳಿಗೆ ಸ್ವಾತಂತ್ರೋತ್ಸವದ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿ ಸ್ವಾತಂತ್ರ್ಯದ ಹಿರಿಮೆಯನ್ನು ಹೆಚ್ಚಿಸಿದ್ದು ನಾವು ಭಾರತೀಯರು ಒಂದಾಗಿ ಸೌಹಾರ್ದತೆಯೊಂದಿಗೆ ಬಾಳೋಣ ಎಂದರು.

ರೋಟರಿ ಕ್ಲಬ್ ಪುತ್ತೂರು ಪೂರ್ವಾಧ್ಯಕ್ಷ ಜೈರಾಜ್ ಭಂಡಾರಿ ಮಾತನಾಡಿ, ರಫೀಕ್ ರವರು ತನ್ನ ಮಳಿಗೆಯಲ್ಲಿ ವಿಭಿನ್ನತೆಯಿಂದ ಕೂಡಿದ ಚಟುವಟಿಕೆಗಳನ್ನು ಮಾಡುತ್ತಿದ್ದು ನಾವೆಲ್ಲ ಅವನ್ನು ಅನುಕರಣೆ ಮಾಡಬೇಕಾದ ವ್ಯಕ್ತಿತ್ವವಾಗಿದೆ ಎಂದರು.

ಸಿಂಚನ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ಪರಮೇಶ್ವರ ಗೌಡ ಮಾತನಾಡಿ, ರಾಷ್ಟ್ರೀಯ ಹಬ್ಬಗಳನ್ನು ವಿಶೇಷವಾಗಿ ಆಚರಿಸುವ ಮೂಲಕ ಮಳಿಗೆಗೆ ಗ್ರಾಹಕರನ್ನು ಸೆಳೆಯುವಂತಹ ರೀತಿ ಆಕರ್ಷಣೀಯ. ನಮ್ಮ ರಾಷ್ಟ್ರದ ಬಗ್ಗೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಸದಾ ಗೌರವ ಹೊಂದುವವರಾಗಬೇಕು ಎಂದರು.

ದರ್ಜಿ ಪ್ರಿಸಿಷನ್ ಕಾರ್ ಸೆಂಟರ್ನನ ಸುಜಿತ್ ಡಿ.ರೈ ಮಾತನಾಡಿ, ನಯಾ ಚಪ್ಪಲ್ ಬಜಾ‌ರ್ ಮಳಿಗೆಯು ಶಿಕ್ಷಕರ, ಮಕ್ಕಳ, ಕಾರ್ಮಿಕರ ಹೀಗೆ ಹಲವಾರು ದಿನಾಚರಣೆಗಳನ್ನು ನಡೆ ಮೂಲಕ ಸಮಾಜವನ್ನು ಹುರಿದುಂಬಿಸುವ ಕಾರ್ಯವನ್ನು ಮಾಡಿ ಪುತ್ತೂರಿಗೆ ಹಾಗೂ ಮಳಿಗೆಗೆ ಹೆಸರು ತಂದಿದೆ ಎಂದರು.

ರಾಜ್ಯ ಅಬಕಾರಿ ಇಲಾಖೆಯ ಪುತ್ತೂರು ಶಾಖೆಯ ಪ್ರೇಮಾನಂದ ಬಿ. ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಜನೆಯೊಂದಿಗೆ ದೇಶಭಕ್ತಿಯನ್ನು ಹೊಂದುವಂತಾಗಲಿ ಎಂದು ಹೇಳಿ, ನಯಾ ಚಪ್ಪಲ್ ಬಜಾರ್ ಮಳಿಗೆಯ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅಕೌಂಟೆಂಟ್ ನಟರಾಜ್ ಮಾತನಾಡಿ, ರಫೀಕ್ ಎಂ.ಜಿ ರವರು ಮಾಡುವ ಈ ಸಮಾಜಮುಖಿ ಕಾರ್ಯಗಳು ಇತರರು ಅನುಷ್ಠಾನಕ್ಕೆ ತಂದರೆ ಸಮಾಜದಲ್ಲಿ ಬಾಂಧವ್ಯ ವೃದ್ಧಿಯಾಗುವುದು ಎಂದರು.

215 ಸರ್ಧಿಗಳು

ಕಳೆದ ಬಾರಿ ರಸಪ್ರಶ್ನೆಯಲ್ಲಿ 108 మంది విద్యా థీ౯గలు ಭಾಗವಹಿಸಿದ್ದರು. ಈ ಬಾರಿ 215 మంది విద్యా థి౯గలు ಭಾಗವಹಿಸಿದ್ದರು. ಪ್ರಥಮ, ದ್ವಿತೀಯ, ತೃತೀಯ ಜೊತೆಗೆ ಎಳು ಮಂದಿಗೆ ಆಕರ್ಷಕ ಬಹುಮಾನವನ್ನು ನೀಡಲಾಯಿತು. ರಸಪ್ರಶ್ನೆಯಲ್ಲಿ ಭಾಗವಹಿಸಿದ ಪ್ರೋತ್ಸಾಹಕ ಬಹುಮಾನವನ್ನು ನೀಡಿ ಗೌರವಿಸಿದರು

ಚೀಟಿ ಎತ್ತುವಿಕೆ ಮೂಲಕ ಆಯ್ಕೆ.

ಮಳಿಗೆಯು ಹಮ್ಮಿಕೊಂಡ ಈ ಸ್ಪರ್ಧೆಯಲ್ಲಿ 215 ಮಂದಿ ವಿದ್ಯಾರ್ಥಿಗಳು

ಭಾಗವಹಿಸಿದ್ದು ಇದರಲ್ಲಿ 35 ಮಂದಿ ಗರಿಷ್ಟ ಸಮಾನ ಅಂಕಗಳನ್ನು ಪಡೆದವರಾಗಿದ್ದರು. ಸಮಾನ ಅಂಕಗಳು ಬಂದರೆ ವಿಜೇತರನ್ನು ಅ.14 ರಂದು ಪುತ್ತೂರು ನಗರ ಠಾಣೆಯ ಎಸ್.ಐ ಆಂಜನೇಯ ರೆಡ್ಡಿ, ಪುತ್ತೂರು ವರ್ತಕ ಸಂಘದ ಅಧ್ಯಕ್ಷ ವಾಮನ ಪೈ, ಏಷ್ಯನ್ ವುಡ್ ಮಾಲಕ ಇಸ್ಮಾಯಿಲ್‌ರವರು ಚೀಟಿ ಎತ್ತುವಿಕೆ ಮೂಲಕ ಆರಿಸಿ ಶುಭ ಹಾರೈಸಿದರು.

ಬಹುಮಾನ ವಿಜೇತರು..

ಈ ರಸಪ್ರಶ್ನೆಯಲ್ಲಿ ಪುಷಕ್, ಸರಕಾರಿ ಪ್ರಾಥಮಿಕ ಶಾಲೆ ಕಾಣಿಯೂರು (ಪ್ರ), ಪ್ರಥ್ವಿಎನ್, ಸಂತ ವಿಕ್ಟರ್ ಶಾಲೆ(ದ್ವಿ), ಫಾತಿಮತ್ ಬಾರಿರ, ಸರಕಾರಿ ಶಾಲೆ ಸವಣೂರು(ತೃ), ಹಾಗೂ ಆಕರ್ಷಕ ಬಹುಮಾನಕ್ಕೆ ಅಭಿಷೇಕ್ (ಸರಸ್ವತಿ ಕಡಬ), ಜನ್ಯಾ ಡಿ(ಲಿಟ್ಸ್ ಫ್ಲವರ್ ದರ್ಬೆ), ಹೈಜಾ ಫಾತಿಮಾ ಎಂ(ಸೈಂಟ್ ವಿಕ್ಟರ್ ಪುತ್ತೂರು), ಫಾತಿಮತ್ ಮನ್ಸೂರಾ(ಸರಕಾರಿ ಶಾಲೆ ಕಬಕ), ಮುಹಮ್ಮದ್ ಹಮೀಜ್ ಎಂ(ಬೆಥನಿ ಪುತ್ತೂರು), ರಶ್ಮಿ ಆರ್ (ಸರಕಾರಿ ಶಾಲೆ ಸವಣೂರು), ಮೊಹಮದ್ ಮಶೂಕ್(ಸರಕಾರಿ ಶಾಲೆ ಕಬಕ)ರವರು ಪಾತ್ರರಾದರು.

ಕಾರ್ಯಕ್ರಮದಲ್ಲಿ ಬೊಳ್ಳಾರು ಸ್ಟಾರ್ಟ್ ಸಾಫ್ಟ್‌ವೇರ್ ಟೆಕ್ನಿಲಜೀಸ್‌ನ ಸಾಫ್ಟ್‌ವೇರ್  ಇಂಜಿನಿಯರ್ ಸತೀಶ್ ನಾಯಕ್, ರೋಟರಿ ಪುತ್ತೂರು ಸದಸ್ಯರಾದ  ಕೃಷ್ಣಪ್ರಸಾದ್, ಬಿ.ವಿ ಕಿಶನ್, ರೋಟರಿ ‘ಯುವ ಪೂರ್ವಾಧ್ಯಕ್ಷ ನರಸಿಂಹ ಪೈ, ಸುದರ್ಶನ್ ಎಂಟರ್‌ಪ್ರೈಸಸ್‌ನ ಮನೋಜ್ ಟಿ.ವಿ, ರೋಟರಿ ಪುತ್ತೂರು ಸದಸ್ಯ ಪಿ.ಡಿ ಕೃಷ್ಣಕುಮಾರ್ ರೈ, ನಯಾ ಚಪ್ಪಲ್ ಬಜಾರ್ ಪಾಲುದಾರ ಸಿದ್ದೀಕ್ ರವರು ಉಪಸ್ಥಿತರಿದ್ದರು. ನಯಾ ಚಪ್ಪಲ್ ಬಜಾರ್ ಮಳಿಗೆಯ ಪಾಲುದಾರ ರಫೀಕ್ ಎಂ.ಜಿ ಸ್ವಾಗತಿಸಿ, ವಂದಿಸಿದರು. ಮಳಿಗೆಯ ಮ್ಯಾನೇಜರ್ ಪ್ರಶಾಂತ್ ಸಹಿತ ಸಿಬ್ಬಂದಿಗಳು ಸಹಕರಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!