ಬೆಂಗಳೂರು :ಬೆಂಗಳೂರಿನ ಕಬ್ಬನ್ ರೋಡ್ನಲ್ಲಿರುವ ಪ್ರೆಸ್ಟೀಜ್ ಮಿಂಸ್ಕ್ ಸ್ಕ್ವಯರ್ನಲ್ಲಿ ಎಂಬಸಿ ಜೆನಿತ್ ಕಟ್ಟಡದಲ್ಲಿ ಆಯಪಲ್ ಕಂಪನಿ ತನ್ನ ಅಸ್ತಿತ್ವವನ್ನು ಹೆಚ್ಚಿಸಿಕೊಂಡಿದೆ. ಈ ಕಟ್ಟಡದ 5ರಿಂದ 13ನೇ ಮಹಡಿ ತನಕ ಒಂಬತ್ತು ಅಂತಸ್ತುಗಳನ್ನು ಆಯಪಲ್ ಬಾಡಿಗೆಗೆ ಪಡೆದಿದ್ದು, ಒಟ್ಟು 2.7 ಲಕ್ಷ ಚದರಡಿ ವಿಸ್ತೀರ್ಣದ ಜಾಗವನ್ನು ಬಳಸಿಕೊಳ್ಳಲಿದೆ.
🔹 ಬಾಡಿಗೆ ವಿವರಗಳು:
ಮಾಸಿಕ ಬಾಡಿಗೆ: ₹6.315 ಕೋಟಿ
ಪ್ರತೀ ಚದರಡಿ ಬಾಡಿಗೆ: ₹235
ಒಪ್ಪಂದ ಅವಧಿ: 10 ವರ್ಷಗಳು
ವಾರ್ಷಿಕ ಬಾಡಿಗೆ ಏರಿಕೆ: 4.5%
ಅಡ್ವಾನ್ಸ್/ಸೆಕ್ಯೂರಿಟಿ ಡೆಪಾಸಿಟ್: ₹31.57 ಕೋಟಿ
10 ವರ್ಷಗಳ ಒಟ್ಟು ವೆಚ್ಚ (ಬಾಡಿಗೆ + ಪಾರ್ಕಿಂಗ್ + ಮೈಂಟೆನೆನ್ಸ್): ₹1,010 ಕೋಟಿ
ಈ ಒಪ್ಪಂದವು ಬೆಂಗಳೂರಿನಲ್ಲಿ ದಾಖಲಾಗಿರುವ ಅತಿದೊಡ್ಡ ಬಾಡಿಗೆ ಒಪ್ಪಂದಗಳಲ್ಲಿ ಒಂದಾಗಿದೆ. ಕಟ್ಟಡದಲ್ಲಿ ಸುಮಾರು 1,200 ಮಂದಿ ಕೆಲಸ ಮಾಡುವ ನಿರೀಕ್ಷೆಯಿದೆ.
🔹 ಮುಂದಿನ ಯೋಜನೆಗಳು:
ಆಯಪಲ್ ಕಂಪನಿ ಇದೇ ಕಟ್ಟಡದ ಕೆಳಗಿನ 4 ಅಂತಸ್ತುಗಳನ್ನೂ (1,21,203 ಚದರಡಿ) ಬಾಡಿಗೆಗೆ ಪಡೆಯುವ ಆಲೋಚನೆಯಲ್ಲಿದೆ. ಹೀಗೆ ಒಟ್ಟು 4 ಲಕ್ಷ ಚದರಡಿಗೂ ಹೆಚ್ಚು ಆಫೀಸ್ ಸ್ಪೇಸ್ ಆಯಪಲ್‌ನ ವಶವಾಗಲಿದೆ.
🔹 ಬೆಂಗಳೂರು ಮತ್ತು ಭಾರತದ ಇತರ ಹೂಡಿಕೆಗಳು:
ಕಬ್ಬನ್ ರೋಡ್‌ನ ಪ್ರೆಸ್ಟೀಜ್ ಮಿಂಸ್ಕ್ ಸ್ಕ್ವೇರ್ನಲ್ಲಿ 1.16 ಲಕ್ಷ ಚದರಡಿ ಜಾಗ, ಮಾಸಿಕ ₹2.43 ಕೋಟಿ ಬಾಡಿಗೆ.
ಬ್ಯಾಟರಾಯನಪುರದಲ್ಲಿ 8,000 ಚದರಡಿ ವಿಸ್ತೀರ್ಣದ ಜಾಗ ಲೀಸ್.
ದೆಹಲಿ ಮತ್ತು ಮುಂಬೈನಲ್ಲಿ ಈಗಾಗಲೇ ರೀಟೇಲ್ ಸ್ಟೋರ್‌ಗಳನ್ನು ಹೊಂದಿರುವ ಆಯಪಲ್, ಶೀಘ್ರದಲ್ಲೇ ಬೆಂಗಳೂರು ಹಾಗೂ ಪುಣೆಯಲ್ಲಿ 4 ಹೊಸ ಸ್ಟೋರ್‌ಗಳನ್ನು ಆರಂಭಿಸಲು ಯೋಜನೆ ಮಾಡಿಕೊಂಡಿದೆ.














