
ಪುತ್ತೂರು: ಮುಕ್ವೆಯ ಪ್ರಸಿದ್ಧ ಹೋಟೆಲ್ ರೈನ್ ಬೋ (VEG & NON-VEG) ಇದೀಗ ಸ್ಥಳಾಂತರಗೊಂಡು ಮುಕ್ವೆ ಅಲ್-ಅರಫ ರೆಸಿಡೆನ್ಸಿ ಕಟ್ಟಡದಲ್ಲಿ ಆ. 25ರಂದು ಶುಭಾರಂಭಗೊಂಡಿತು.
ವಿದ್ಯಾರ್ಥಿ ನೂರುಲ್ ಹುದಾ ಮಾಡನ್ನೂರ್‌ನ ನಸ್ಟಿರ್ ಫೈಝಲ್ ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು.ಮುಕ್ವೆ ಜುಮಾ ಮಸೀದಿ ಖತೀಬ್ ಇರ್ಷಾದ್ ಫೈಝಿ ದುವಾ ಕಾರ್ಯಕ್ರಮ ನಡೆಸಿಕೊಟ್ಟರು.
ಮುಖ್ಯ ಅತಿಥಿ ಆಗಿ ಭಾಗವಹಿಸಿದ ನರಿಮೊಗರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಚಂದ್ರ ಎಂ ಮಾತನಾಡಿ, “ಮುಕ್ವೆ ವೇಗವಾಗಿ ಬೆಳೆಯುತ್ತಿರುವ ಪ್ರದೇಶ. ಇಂತಹ ಉದ್ಯಮಗಳು ಆರಂಭವಾಗುವುದರಿಂದ ಊರಿನ ಅಭಿವೃದ್ಧಿಗೆ ಪೂರಕವಾಗುತ್ತದೆ. ಗ್ರಾಮ ಪಂಚಾಯತ್ ವತಿಯಿಂದ ಸಂಪೂರ್ಣ ಸಹಕಾರ ದೊರೆಯುತ್ತದೆ. ಸ್ವಚ್ಛತೆಗೆ ಆದ್ಯತೆ ನೀಡಿ ವ್ಯವಹಾರ ಮುಂದುವರಿಸಬೇಕು” ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಅಬ್ದುಲ್ ಹಮೀದ್ ಹನೀಫಿ (ನರಿಗೇರಿ), ಹಿ.ಪ್ರಾ. ಶಾಲೆ ಮುಕ್ವೆಯ ಮುಖ್ಯಗುರು ಕಾರ್ಮೆಲಸ್ ಅಂದ್ರಾದೆ, ಆರ್.ಜೆ.ಎಂ. ಮುಕ್ವೆ ಮಸೀದಿ ಅಧ್ಯಕ್ಷ ಇಬ್ರಾಹಿಂ ಮುಲಾರ್, ಸಹಾರ ಅರ್ಥ್ ಮೂವರ್ಸ್ ಮಾಲಕ ಜಮಾಲ್ ಹಾಜಿ ಮುಕ್ವೆ,ಅಲ್-ಅರಫ ರೆಸಿಡೆನ್ಸಿ ಮಾಲಕ ಜನಾಬ್ ಮೊಹಮ್ಮದ್ ಅನ್ವರಿ ಹಾಗೂ ಹೋಟೆಲ್ ರೈನ್‌ಬೋ ಮಡಿಕೇರಿ ಮಾಲಕ ಫಿರೋಜ್ ಎಂ. ಉಪಸ್ಥಿತರಿದ್ದರು.
ಮಾಲಕ ಲತೀಫ್ ನರಿಗೇರಿ ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿ, “ನಮ್ಮ ಹೋಟೆಲ್‌ನಲ್ಲಿ ಬಿರಿಯಾನಿ, ಚಿಕನ್ ಬಿರಿಯಾನಿ, ಅಲ್-ಫಹಮ್, ಶವರ್ಮಾ, ಟಿಕ್ಕ, ಗೋಬಿ ಮಂಚೂರಿ, ಚಿಕನ್ ಮಂಚೂರಿ, ಪ್ರೈಡ್ ರೈಸ್, ನೂಡಲ್ಸ್, ಮಿಲ್ಕ್ ಶೇಕ್, ಫ್ರೆಶ್ ಜ್ಯೂಸ್ ಹಾಗೂ ಐಸ್ ಕ್ರೀಂಗಳು ಲಭ್ಯ. ಮುಕ್ವೆ ವ್ಯಾಪ್ತಿಯಲ್ಲಿ ಹೋಂ ಡೆಲಿವರಿ ಸೌಲಭ್ಯ ಕಲ್ಪಿಸಲಾಗಿದೆ. ಪ್ರತಿದಿನ ಬೆಳಗ್ಗೆ 11ರಿಂದ ರಾತ್ರಿ 11ರವರೆಗೆ ಸೇವೆ ಲಭ್ಯ” ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಅಶ್ರಫ್ ಮುಕ್ವೆ ನಿರೂಪಿಸಿದರು.






