ಪುತ್ತೂರು: ಖಾಸಗಿ ಕಾಲೇಜಿನ ನೃತ್ಯ ಕಾರ್ಯಕ್ರಮದ ಸಂಬಂಧ ಇನ್‌ಸ್ಟಾಗ್ರಾಂನಲ್ಲಿ ಧಾರ್ಮಿಕ ವೈಮನಸ್ಸು ಉಂಟುಮಾಡುವ ರೀತಿಯ ಸುಳ್ಳು ಸಂದೇಶ ಹಾಕಿದ ಹಿನ್ನೆಲೆಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಪನ್ಯಾಸಕರಾದ ಜೋನ್ಸನ್ ಡೇವಿಡ್ ಸೀಕ್ವೆರ (35) ಅವರ ದೂರಿನ ಮೇರೆಗೆ, @tm_bad_karma_990 ಎಂಬ ಖಾತೆಯ ಬಳಕೆದಾರನು, ಆಗಸ್ಟ್ 19ರಂದು ಕಾಲೇಜಿನಲ್ಲಿ ನಡೆದ ನೃತ್ಯ ಕಾರ್ಯಕ್ರಮದಲ್ಲಿ ನಿರ್ದಿಷ್ಟ ಸಮುದಾಯದ ವಿದ್ಯಾರ್ಥಿನಿಯರು ಭಾಗವಹಿಸಿದ್ದನ್ನು ಟೀಕಿಸಿ, ಧರ್ಮದ ಆಧಾರದ ಮೇಲೆ ವಿಭಜನೆ ಉಂಟುಮಾಡುವಂತಹ ಮತ್ತು ಸುಳ್ಳು ಮಾಹಿತಿ ಒಳಗೊಂಡ ಪೋಸ್ಟ್‌ ಮಾಡಿದ್ದಾನೆ. ಅಲ್ಲದೆ, ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳನ್ನು ಬಳಸಿ ಬೆದರಿಕೆ ಹಾಕಿರುವುದು ದೂರಿನಲ್ಲಿ ತಿಳಿಸಲಾಗಿದೆ.

ಈ ಸಂಬಂಧ ಅ.ಕ್ರ: 77/2025, ಕಲಂ 196(1)(a)(b), 351(2), 352 BNS 2023ರಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!