
ಪುತ್ತೂರು: ಕ್ಯಾನ್ಸರ್ ಪೀಡಿತ ಇಬ್ಬರು ಮಕ್ಕಳ ಚಿಕಿತ್ಸೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಆರ್ಥಿಕ ನೆರವು ಮಂಜೂರಾಗಿದೆ.ಕೊಳ್ತಿಗೆ ಗ್ರಾಮದ ಪಾಲ್ತಾಡು ನಿವಾಸಿ ಹರ್ಷದ್ ಸಾಹೇಬ್ ಅವರ 2 ವರ್ಷದ ಮಗ ತಮೀಮ್ ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ 12 ಲಕ್ಷ ರೂ. ವೆಚ್ಚವಾಗುತ್ತಿದೆ. ಬಡ ಕುಟುಂಬಕ್ಕೆ ನೆರವು ದೊರಕುವಂತೆ ಶಾಸಕ ಅಶೋಕ್ ರೈ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದು, ಇದರ ಹಿನ್ನೆಲೆಯಲ್ಲಿ 4 ಲಕ್ಷ ರೂ. ಪರಿಹಾರಧನ ಮಂಜೂರಾಗಿದೆ.
ಕೊಳ್ತಿಗೆ ಗ್ರಾಮದ ಪಾಲ್ತಾಡು ನಿವಾಸಿ ಹರ್ಷದ್ ಸಾಹೇಬ್ ಅವರ 2 ವರ್ಷದ ಮಗ ತಮೀಮ್ ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ 12 ಲಕ್ಷ ರೂ. ವೆಚ್ಚವಾಗುತ್ತಿದೆ. ಬಡ ಕುಟುಂಬಕ್ಕೆ ನೆರವು ದೊರಕುವಂತೆ ಶಾಸಕ ಅಶೋಕ್ ರೈ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದು, ಇದರ ಹಿನ್ನೆಲೆಯಲ್ಲಿ 4 ಲಕ್ಷ ರೂ. ಪರಿಹಾರಧನ ಮಂಜೂರಾಗಿದೆ.
ಇದೇ ರೀತಿ ಮೂಡಬಿದ್ರೆಯ ಪುತ್ತಿಗೆ ಪದವು ನಿವಾಸಿ ಮೊಹಮ್ಮದ್ ಕಬೀರ್ ಅವರ ಪುತ್ರ 16 ವರ್ಷದ ಮೊಹಮ್ಮದ್ ಫಯಾಝ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗೆ 3 ಲಕ್ಷ ರೂ. ನೆರವು ಘೋಷಿಸಲಾಗಿದೆ.






