ಉಡುಪಿ: ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆಯಲ್ಲಿ ಶುಕ್ರವಾರ ನಡೆದ ದುರಂತ ಘಟನೆಯಲ್ಲಿ, ಮದುವೆಗೆ ನಿರಾಕರಿಸಿದ ಯುವತಿಯನ್ನು ಭಗ್ನಪ್ರೇಮಿ ರಸ್ತೆಯಲ್ಲಿ ಚೂರಿಯಿಂದ ಇರಿದು ಕೊಂದ ಬಳಿಕ ಆತನೇ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹತ್ಯೆಗೀಡಾದ ಯುವತಿಯನ್ನು ರಕ್ಷಿತಾ ಎಂದು ಗುರುತಿಸಲಾಗಿದ್ದು, ಆಕೆ ಬ್ರಹ್ಮಾವರ ಸರ್ವೇ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಳು. ಆತ್ಮಹತ್ಯೆ ಮಾಡಿಕೊಂಡ ಆರೋಪಿಯನ್ನು ಕಾರ್ತಿಕ್ ಪೂಜಾರಿ ಎಂದು ಗುರುತಿಸಲಾಗಿದೆ.

ಘಟನೆಯ ವಿವರ

ಶುಕ್ರವಾರ ಬೆಳಗ್ಗೆ ರಕ್ಷಿತಾ ಬಸ್ ನಿಲ್ದಾಣದತ್ತ ನಡೆದುಕೊಂಡು ಹೋಗುತ್ತಿದ್ದಾಗ, ಸಂಬಂಧಿಕನಾದ ಕಾರ್ತಿಕ್ ಬೈಕಿನಲ್ಲಿ ಬಂದು ಆಕೆಯನ್ನು ತಡೆದಿದ್ದಾನೆ. ಮದುವೆಯಾಗಲು ಒಪ್ಪುತ್ತೀಯಾ ಎಂದು ಕೇಳಿದಾಗ ಆಕೆ ನಿರಾಕರಿಸಿದ್ದು, ಆಕ್ರೋಶಗೊಂಡ ಕಾರ್ತಿಕ್ ಚೂರಿಯಿಂದ ಕುತ್ತಿಗೆ ಮತ್ತು ಎದೆಯ ಮೇಲೆ ಬಿದ್ದುಕೊಂಡಿದ್ದಾಳೆ.

ತೀವ್ರ ರಕ್ತಸ್ರಾವದಿಂದ ನೆಲಕ್ಕುರುಳಿದ ರಕ್ಷಿತಾಳನ್ನು ಸ್ಥಳೀಯರು ತಕ್ಷಣ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಗಂಭೀರ ಗಾಯಗಳ ಪರಿಣಾಮದಿಂದ ಆಕೆ ಸಂಜೆ ಮೃತಪಟ್ಟಳು. ದುರ್ಘಟನೆಯ ದಿನವೇ ರಕ್ಷಿತಾಳ ಹುಟ್ಟುಹಬ್ಬವಾಗಿದ್ದು, ಇದೇ ದಿನ ಸಾವನ್ನಪ್ಪಿರುವುದು ಕುಟುಂಬದವರ ದುಃಖವನ್ನು ಇನ್ನಷ್ಟು ಗಾಢಗೊಳಿಸಿದೆ.

ಆತ್ಮಹತ್ಯೆ ಮಾಡಿದ ಆರೋಪಿ

ಘಟನೆಯ ಬಳಿಕ ಸ್ಥಳದಿಂದ ಪರಾರಿಯಾದ ಕಾರ್ತಿಕ್, ಸಂಜೆ ವೇಳೆ ಮನೆಯ ಬಳಿಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಕೊಲೆ ಮಾಡಿದ ಆತಂಕದಿಂದಲೇ ಆತ ಬಾವಿಗೆ ಹಾರಿ ಜೀವ ಕೊಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರು ತನಿಖೆ ಮುನ್ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!