ಮಂಗಳೂರು, ನ.07:ನಗರದಲ್ಲಿ ಮಾದಕವಸ್ತು ದಂಧೆ ವಿರುದ್ಧ ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ, ಸಾರ್ವಜನಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಎಂಡಿಎಂಎ ಮಾದಕ ವಸ್ತು ಪೂರೈಸುತ್ತಿದ್ದ ಇಬ್ಬರನ್ನು ಬಂಧಿಸಿ, ಒಟ್ಟು 24.57 ಗ್ರಾಂ ಎಂಡಿಎಂಎ ಸಹಿತ ಸು. ₹4.35 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.




ಪ್ರಕರಣ–1

ನವೆಂಬರ್ 4 ರಂದು ಬಂದರು ಹಾಗೂ ದಕ್ಕೆ ಪರಿಸರದಲ್ಲಿ ಆಟೋ ರಿಕ್ಷಾದಲ್ಲಿ ಮಾದಕ ವಸ್ತು ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಆಟೋ ಚಾಲಕ ಅಬ್ದುಲ್ ಸಲಾಮ್ (39) ತಂದೆ ಅಬ್ದುಲ್ ಹಮೀದ್, ನಿವಾಸಿ ಎಸ್.ಎಚ್. ನಗರ, ಅಡ್ಯಾರ್, ಕಣ್ಣೂರು, ಮಂಗಳೂರು — ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಯಿಂದ ವಶಪಡಿಸಿಕೊಂಡ ವಸ್ತುಗಳು:

ಎಂಡಿಎಂಎ ಮಾದಕವಸ್ತು (ಮೌಲ್ಯ: ₹1,20,000)

ಆಟೋ ರಿಕ್ಷಾ

ಮೊಬೈಲ್

ತೂಕಮಾಪನ ಯಂತ್ರ

ಜಿಪ್ ಲಾಕ್ ಕವರ್‌ಗಳು
ಒಟ್ಟು ಮೌಲ್ಯ: ₹2,30,500


ಈ ಕುರಿತು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




ಪ್ರಕರಣ–2

ನವೆಂಬರ್ 6 ರಂದು ಬೋಳಿಯಾರು ಪರಿಸರದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಮಾದಕ ವಸ್ತು ಮಾರಾಟ ನಡೆಯುತ್ತಿದೆ ಎಂಬ ಮಾಹಿತಿ ಆಧರಿಸಿ ದಾಳಿ ನಡೆಸಿದ ಸಿಸಿಬಿ ತಂಡವು, ಮೊಹಮ್ಮದ್ ನಾಸೀರ್ @ ಶಾಕೀರ್ @ ಚಾಕಿ (28) ತಂದೆ: ದಿ. ಅಬ್ದುಲ್ ರೆಹಮಾನ್, ನಿವಾಸಿ ಜಾರದಗುಡ್ಡೆ, ಬೋಳಿಯಾರು, ಉಳ್ಳಾಲ — ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಯಿಂದ ವಶಪಡಿಸಿಕೊಂಡ ವಸ್ತುಗಳು:

ಎಂಡಿಎಂಎ (ಮೌಲ್ಯ: ₹1,20,000)

ಯಮಹಾ FZ ಬೈಕ್ (ಕಪ್ಪು ಬಣ್ಣ)

ಮೊಬೈಲ್

ಜಿಪ್ ಲಾಕ್ ಕವರ್‌ಗಳು
ಒಟ್ಟು ಮೌಲ್ಯ: ₹2,05,000


ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




ತನಿಖೆ ಮುಂದುವರಿಕೆ

ಈ ಎಂಡಿಎಂಎ ಮಾರಾಟ ಹಾಗೂ ಸಾಗಾಟ ಜಾಲದಲ್ಲಿ ಇನ್ನೂ ಅನೇಕರು ಭಾಗಿಯಾಗಿರುವ ಸಾಧ್ಯತೆ ಇದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.




ಪೊಲೀಸರ ಮೆಚ್ಚುಗೆಗೆ ಪಾತ್ರವಾದ ಕಾರ್ಯಾಚರಣೆ

ಈ ಕಾರ್ಯಾಚರಣೆಯಲ್ಲಿ ಮಂಗಳೂರು ಸಿಸಿಬಿ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದು, ಮಾದಕ ವಸ್ತು ನಿಯಂತ್ರಣ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಯಶಸ್ಸು ಸಾಧಿಸಿದ್ದಾರೆ

Leave a Reply

Your email address will not be published. Required fields are marked *

Join WhatsApp Group
error: Content is protected !!