
ಪುತ್ತೂರು: ಬನ್ನೂರು ಆನೆಮಜಲು ನಿವಾಸಿ ಹಾಗೂ ಪುತ್ತೂರು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಸಮೀಪದ ‘ಚಂದ್ರಾ ಫ್ಯಾನ್ಸಿ’ ಮಳಿಗೆಯ ಮಾಲಕ ದಿನೇಶ್ ಆಚಾರ್ಯ (55) ಅವರು ಶನಿವಾರ ಹೃದಯಾಘಾತದಿಂದ ಅಗಲಿದ್ದಾರೆ.
ಮಂಗಳೂರಿನಲ್ಲಿ ನಡೆದಿದ್ದ ಕಾರ್ಯಕ್ರಮವೊಂದರ ವೇಳೆ ಅವರು ಏಕಾಏಕಿ ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿರುವುದಾಗಿ ಕುಟುಂಬ ಮೂಲಗಳು ತಿಳಿಸಿವೆ.
ಪುತ್ತೂರು ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಬಳಿಯ ಮೇಧಾ ಬಿಲ್ಡಿಂಗ್‌ನಲ್ಲಿ ಇರುವ ‘ಚಂದ್ರಾ ಫ್ಯಾನ್ಸಿ ಸ್ಟೋರ್’ ಅನ್ನು ದಿನೇಶ್ ಆಚಾರ್ಯ ಅವರ ತಂದೆ ಪುರುಷೋತ್ತಮ್ ಆಚಾರ್ಯ ಹಲವು ದಶಕಗಳ ಹಿಂದೆ ಸ್ಥಾಪಿಸಿದ್ದರು.
ಮೃತರು ತಾಯಿ, ಪತ್ನಿ, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ






