ಪುತ್ತೂರು : ವೈದ್ಯಕೀಯ ತಜ್ಞ ಡಾ. ನಝೀರ್ ಅಹಮ್ಮದ್ ಅವರ ನೇತೃತ್ವದಲ್ಲಿ ಟರಾಕ್ ಕಬ್ ಪುತ್ತೂರು ಮತ್ತು ರೋಟರಾಕ್ಟ್ ಕ್ಲಬ್ ಪುತ್ತೂರು ಆಶ್ರಯದಲ್ಲಿ ಡಿಸೆಂಬರ್ 10ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ.

ಈ ಶಿಬಿರದಲ್ಲಿ ಮಾಸಿಕ ಥೈರಾಯಿಡ್ ಗ್ರಂಥಿ ತಪಾಸಣೆ ಜೊತೆಗೆ ಶುಗರ್, ಹಿಮೋಗ್ಲೋಬಿನ್ ಹಾಗೂ HBA1C ಪರೀಕ್ಷೆಗಳು ಉಚಿತವಾಗಿ ಲಭ್ಯ.

ಶಿಬಿರದ ವಿವರಗಳು:
ದಿನಾಂಕ: 10-12-2025, ಬುಧವಾರ
ಸಮಯ: ಬೆಳಿಗ್ಗೆ 9.30 ರಿಂದ 12.30
ಸ್ಥಳ: ಡಾ. ನಝೀರ್ ಅಹಮ್ಮದ್ ಕ್ಲಿನಿಕ್, ಕೃಷ್ಣ ಆರ್ಕಡ್, ಕಲ್ಲಾರೆ

ಅತಿಯಾದ ದಣಿವು, ನಿತ್ರಾಣ, ಮಲಬದ್ಧತೆ/ಅತಿಸಾರ, ಶೀತ–ತಾಪ ಅಸಹಿಷ್ಣುತೆ, ಕೂದಲು ಉದುರುವಿಕೆ, ನೆನಪಿನ ಶಕ್ತಿ ಕುಂದುವುದು, ಏಕಾಗ್ರತೆ ಕಷ್ಟ, ತೂಕದಲ್ಲಿ ಹೆಚ್ಚಳ/ಇಳಿಕೆ, ಹೆಂಗಸರಿಗೆ ಅತಿಯಾದ ಅಥವಾ ನಿಯಮ ತಪ್ಪಿದ ಮಾಸಿಕ ಸ್ರಾವ, ಗಂಟಲಿನಲ್ಲಿ ಊತ, ಕರ್ಕಶ ಸ್ವರ, ಹೆಚ್ಚಿದ ಎದೆಬಡಿತ ಅಥವಾ ರಕ್ತದೊತ್ತಡ — ಇಂತಹ ಲಕ್ಷಣಗಳು ಕಂಡುಬರುವವರು ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಲು ಆಯೋಜಕರು ತಿಳಿಸಿದ್ದಾರೆ.

ಸಂಪರ್ಕ: 94814 51929.

Leave a Reply

Your email address will not be published. Required fields are marked *

Join WhatsApp Group
error: Content is protected !!