ಪುತ್ತೂರು ಮುಖ್ಯರಸ್ತೆಯಲ್ಲಿರುವ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ವಜ್ರಾಭರಣಗಳ ವಾರ್ಷಿಕ ಮಹೋತ್ಸವ ‘ಗ್ಲೋ ಫೆಸ್ಟ್’ ಡಿ.15ರಂದು ಆರಂಭಗೊಂಡಿತು. ಒಂದು ತಿಂಗಳ ಕಾಲ ನಡೆಯಲಿರುವ ಈ ಮಹೋತ್ಸವವನ್ನು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ನಳಿನಿ ಪಿ. ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಜ್ರಾಭರಣ ಧಾರಣೆ ಹಾಗೂ ಖರೀದಿ ನಮ್ಮ ಸಂಸ್ಕೃತಿಯ ಭಾಗವಾಗಿದೆ. ವಜ್ರವು ಕೇವಲ ಕಲ್ಲಲ್ಲ; ಅದು ಶುದ್ಧತೆ, ಶಕ್ತಿ, ಪ್ರೇಮ ಹಾಗೂ ವಿಶ್ವಾಸದ ಪ್ರತೀಕವಾಗಿದೆ. ನಂಬಿಕೆ ಮತ್ತು ವಿಶ್ವಾಸದೊಂದಿಗೆ ವೈವಿಧ್ಯಮಯ ವಿನ್ಯಾಸಗಳನ್ನು ಒದಗಿಸುತ್ತಿರುವುದು ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನ ವೈಶಿಷ್ಟ್ಯ ಎಂದು ಹೇಳಿದರು.

ಮಳಿಗೆಯ ಆಡಳಿತ ನಿರ್ದೇಶಕ ಸುಧನ್ವ ಬಿ. ಆಚಾರ್ಯ ಮಾತನಾಡಿ, ವಜ್ರಗಳು ನೈಜ ಹಾಗೂ ಲ್ಯಾಬ್‌ನಲ್ಲಿ ತಯಾರಾಗುವ ವಜ್ರಗಳು ಎಂಬ ಎರಡು ವಿಧಗಳಿದ್ದು, ತಮ್ಮ ಮಳಿಗೆಯಲ್ಲಿ ನೈಜ ವಜ್ರಾಭರಣಗಳನ್ನೇ ಗ್ರಾಹಕರಿಗೆ ಒದಗಿಸಲಾಗುತ್ತಿದೆ ಎಂದರು. ನೈಜ ವಜ್ರಗಳ ಮೌಲ್ಯ ಭೂಮಿಯ ಹುಟ್ಟಿನಷ್ಟೇ ಹಳೆಯದಾಗಿದ್ದು, ಅದರ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಲ್ಯಾಬ್‌ನಲ್ಲಿ ತಯಾರಾಗುವ ವಜ್ರಗಳ ಬೆಲೆ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಕುಸಿದಿದೆ. ಈ ಬಾರಿ ಕೂಡ ಉತ್ತಮ ಸಂಗ್ರಹದೊಂದಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗಿದ್ದು, ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಗ್ಲೋ ಫೆಸ್ಟ್ ವಿಶೇಷತೆಗಳು

ಗ್ಲೋ ಫೆಸ್ಟ್ ಅಂಗವಾಗಿ ವಜ್ರಾಭರಣಗಳ ಮೇಲೆ ಪ್ರತಿ ಕ್ಯಾರೆಟ್‌ಗೆ ರೂ.7,000 ವರೆಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ವಜ್ರಾಭರಣಗಳು ದುಬಾರಿಯೆಂಬ ಭಾವನೆ ಹೊಂದಿರುವವರಿಗೆ ಕೈಗೆಟಕುವ ದರದಲ್ಲೂ ವಜ್ರಾಭರಣಗಳು ಲಭ್ಯವಿದ್ದು, ವಜ್ರಾಭರಣಗಳ ಬೆಲೆ ರೂ.3,500ರಿಂದ ಆರಂಭವಾಗುತ್ತದೆ. ಅಂತರರಾಷ್ಟ್ರೀಯ ಪ್ರಯೋಗಾಲಯದಿಂದ ಪ್ರಮಾಣೀಕೃತ ಉತ್ಕೃಷ್ಟ ಗುಣಮಟ್ಟದ ಮೂಗುತಿ, ಪೆಂಡೆಂಟ್, ಉಂಗುರ, ಕಿವಿಯೋಲೆ, ನೆಕ್‌ಲೆಸ್ ಹಾಗೂ ಬಳೆಗಳ ವೈವಿಧ್ಯಮಯ ಸಂಗ್ರಹ ಮಳಿಗೆಯಲ್ಲಿ ಲಭ್ಯವಿದೆ.

3,600ಕ್ಕೂ ಅಧಿಕ ವಿನ್ಯಾಸಗಳೊಂದಿಗೆ ಎಲ್ಲಾ ವಯೋಮಾನದ ಗ್ರಾಹಕರಿಗೆ ತಕ್ಕಂತೆ ಮಕ್ಕಳ, ಮಹಿಳೆಯರ ಹಾಗೂ ಪುರುಷರ ಅಭಿರುಚಿಗೆ ಹೊಂದುವ ವಜ್ರಾಭರಣಗಳು ಲಭ್ಯವಿವೆ. ಪ್ರಮಾಣೀಕೃತ ಇಎಫ್ ಬಣ್ಣದ ಹಳೆಯ ವಜ್ರಾಭರಣಗಳ ವಿನಿಮಯ ಹಾಗೂ ಮರುಖರೀದಿ ಭರವಸೆ, ಅಚ್ಚರಿಯ ಕೊಡುಗೆಗಳು ಮತ್ತು ಉಡುಗೊರೆಗಳ ಸೌಲಭ್ಯವೂ ಇದೆ. ನುರಿತ ತಜ್ಞರಿಂದ ವಜ್ರಾಭರಣಗಳ ಕುರಿತು ಸಂಪೂರ್ಣ ಮಾಹಿತಿ ನೀಡಲಾಗುತ್ತಿದೆ.

ಫ್ಲೋರ್ ಮ್ಯಾನೇಜರ್ ಭಾರ್ಗವ್ ಸ್ವಾಗತಿಸಿ ವಂದಿಸಿದರು. ಶೋರೂಂ ಮ್ಯಾನೇಜರ್‌ಗಳಾದ ಶೇಖರ್ ಮತ್ತು ಪುರಂದರ, ಮಾರ್ಕೆಟಿಂಗ್ ಮ್ಯಾನೇಜರ್ ಕೀರ್ತನ್ ಸಹಕರಿಸಿದರು. ಮಳಿಗೆಯ ಆಡಳಿತ ನಿರ್ದೇಶಕ ಲಕ್ಷ್ಮೀಕಾಂತ ಆಚಾರ್ಯ, ಗ್ರಾಹಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಡಿ.15ರಿಂದ ಆರಂಭಗೊಂಡಿರುವ ಗ್ಲೋ ಫೆಸ್ಟ್ ಜ.15ರವರೆಗೆ ನಡೆಯಲಿದೆ ಎಂದು ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನ ಚೇರ್ಮನ್ ಬಲರಾಮ ಆಚಾರ್ಯ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!