

ಪುತ್ತೂರು :ಮನೆ ಅಥವಾ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಅತ್ಯುತ್ತಮ ಗುಣಮಟ್ಟದ ಟೈಲ್ಸ್, ಸ್ಯಾನಿಟರಿವೇರ್ ಹಾಗೂ ಸಿಪಿ ಫಿಟ್ಟಿಂಗ್ಸ್‌ಗಳನ್ನು ಸ್ಪರ್ಧಾತ್ಮಕ ದರದಲ್ಲಿ ಪೂರೈಸುತ್ತಿರುವ ಜಿಲ್ಲೆಯ ಅತಿದೊಡ್ಡ ಸಂಸ್ಥೆ ಪ್ರೆಸ್ಟೀಜ್ ಗ್ರೂಪ್‌ನ ಸಹಸಂಸ್ಥೆ ಪ್ರೊ ಪ್ರೆಸ್ಟೀಜ್ ಮಳಿಗೆ ಡಿ.18ರಂದು ಸಂಪೂರ್ಣ ನವೀಕರಣದೊಂದಿಗೆ ಮತ್ತೆ ಶುಭಾರಂಭಗೊಳ್ಳಲಿದೆ.
ಯೆಳ್ಮುಡಿ ಮುಖ್ಯರಸ್ತೆಯಲ್ಲಿರುವ ಪ್ರೊವಿಡೆನ್ಸ್ ಪ್ಲಾಜಾ ಸಂಕೀರ್ಣದಲ್ಲಿ ಕಳೆದ ಐದು ವರ್ಷಗಳಿಂದ ಯಶಸ್ವಿಯಾಗಿ ವ್ಯವಹರಿಸುತ್ತಿರುವ ಪ್ರೊ ಪ್ರೆಸ್ಟೀಜ್, ‘Designing Spaces, Crafting Elegance’ ಘೋಷವಾಕ್ಯದೊಂದಿಗೆ ಗ್ರ್ಯಾಂಡ್ ರೀ-ಓಪನಿಂಗ್‌ಗೆ ಸಜ್ಜಾಗಿದೆ. ಐದು ವರ್ಷಗಳ ಸಾಧನೆ ಮತ್ತು ಗ್ರಾಹಕರ ವಿಶ್ವಾಸವನ್ನು ಸಂಭ್ರಮಿಸುವ ಈ ಕಾರ್ಯಕ್ರಮದಲ್ಲಿ ನವೀಕರಿಸಲಾದ ಮಳಿಗೆ, Jaquar Experience Center ಹಾಗೂ ವಿಶೇಷವಾಗಿ ಆಯ್ದ ಟೈಲ್ ಸಂಗ್ರಹಗಳನ್ನು ಪರಿಚಯಿಸಲಾಗುತ್ತದೆ.
ಕಾರ್ಯಕ್ರಮದ ವಿವರ ಡಿ.18ರಂದು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಜಾಗ್ವಾರ್ ಗ್ರೂಪ್‌ನ ಝೋನಲ್ ಹೆಡ್ ಎಂ.ಟಿ. ಹೆಗ್ಡೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಜೆ.ಕೆ. ಕನ್‌ಸ್ಟ್ರಕ್ಷನ್ಸ್, ಪುತ್ತೂರು ಸಂಸ್ಥೆಯ ಜಯಕುಮಾರ್ ಆರ್. ನಾಯರ್ ಹಾಗೂ ಜಾಗ್ವಾರ್ ಗ್ರೂಪ್‌ನ ಸೀನಿಯರ್ ಮ್ಯಾನೇಜರ್ ಲಕ್ಷ್ಮೀಕಾಂತ ಪೂಜಾರಿ ವಿಶೇಷ ಅತಿಥಿಗಳಾಗಿ ಉಪಸ್ಥಿತರಿರುವರು.
ವ್ಯಾಪಕ ಸೇವಾ ಜಾಲ ಜಿಲ್ಲೆಯ ಪ್ರಮುಖ ನಿರ್ಮಾಣ ಸಂಸ್ಥೆಗಳಿಗೆ ಟೈಲ್ಸ್ ಹಾಗೂ ಸ್ಯಾನಿಟರಿವೇರ್ ಪೂರೈಸುತ್ತಿರುವ ಪ್ರೆಸ್ಟೀಜ್ ಗ್ರೂಪ್‌ನ ಒಟ್ಟು ಐದು ಸಂಸ್ಥೆಗಳು ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎರಡು ದೊಡ್ಡ ದಾಸ್ತಾನು ಕೇಂದ್ರಗಳನ್ನು ಹೊಂದಿದೆ. 50 ಸಾವಿರಕ್ಕೂ ಹೆಚ್ಚು ಗ್ರಾಹಕರ ವಿಶ್ವಾಸ ಪಡೆದಿರುವ ಸಂಸ್ಥೆ ಗುಣಮಟ್ಟ ಹಾಗೂ ಸೇವೆಗೆ ಆದ್ಯತೆ ನೀಡುತ್ತಿದೆ.
ಉತ್ಪನ್ನಗಳ ವೈವಿಧ್ಯ ಮಳಿಗೆಯಲ್ಲಿ ಜಾಗ್ವಾರ್, ಅರ್ಟೈಝ್, ಎಸ್ಕೋ, ಆ್ಯಸ್ಟಲ್ ವೆಬರ್, ಕಾಜಾರಿಯಾ, ಮೊಟ್ಟೋ, ಮೆಟ್ರೋ, ಪಂಡ್, ಹಪ್ಲೆ, ಮೊನೊಲಿತ್ ಹಾಗೂ ಫ್ರಾಂಕಿ ಸೇರಿದಂತೆ ಹಲವು ಹೆಸರಾಂತ ಬ್ರ್ಯಾಂಡ್‌ಗಳ ಉತ್ಪನ್ನಗಳು ಲಭ್ಯವಿವೆ. ವಾಲ್ ಟೈಲ್ಸ್, ಫ್ಲೋರ್ ಟೈಲ್ಸ್, ಬಾತ್‌ರೂಮ್ ಹಾಗೂ ಕಿಚನ್ ಟೈಲ್ಸ್, ಟೇಬಲ್ ಟಾಪ್ ಮತ್ತು ಔಟ್‌ಡೋರ್ ಟೈಲ್ಸ್ ಸೇರಿದಂತೆ ಜಾಗ್ವಾರ್ ಕಂಪನಿಯ ಸಂಪೂರ್ಣ ಉತ್ಪನ್ನಗಳು ವಿಶೇಷ ದರದಲ್ಲಿ ಗ್ರಾಹಕರಿಗೆ ಲಭ್ಯವಿವೆ.
ಆಹ್ವಾನ ಡಿ.18ರಂದು ನಡೆಯುವ ಈ ವಿಶೇಷ ಸಂದರ್ಭಕ್ಕೆ ಸಾರ್ವಜನಿಕರು ಹಾಗೂ ಗ್ರಾಹಕರು ಭಾಗವಹಿಸುವಂತೆ ಸಂಸ್ಥೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಸ್ಥಳ: ಪ್ರೊವಿಡೆನ್ಸ್ ಪ್ಲಾಜಾ, ಯೆಳ್ಮುಡಿ, ಮುಖ್ಯರಸ್ತೆ, ಪುತ್ತೂರು – 574201







